Davangere, June 20: Rashtrotthana Vidya Kendra – Davangere, Rashtrotthana Vidyalaya, Rashtrotthana Samyukta Pre-University College and Vijayavani newspaper celebrated the 12th International Yoga Day and World Music Day in collaboration. The theme of this year’s Yoga Day was “Yoga for Healthy Ageing”. The chief guests of the program were Sri Suman N.S., Teaching Assistant, Department of Studies in Yogic Science, University of Davangere and special guests Sri Naveen M.B., Resident Editor, Vijayavani newspaper, Chitradurga edition, Davangere. Then Khushi T.P., a student of class 9, On the occasion of World Music Day, they spoke about the importance of music, its history, heritage and their experiences of practicing music. Later, Bhumika and Anvi, students of class 7, performed various attractive yoga poses with their classmates and won everyone’s appreciation. The chief guest addressed the students and referred to the messages of the Bhagavad Gita, “Yogah Karmasu Kaushalam” and “Samatvam Yoga Uchyate”, explaining the importance of yoga, its positive effects on physical and mental health and the need to create a healthy lifestyle through yoga-meditation. The teachers also informed the students about the importance of yoga and its health benefits. Yoga teacher Smt. Geeta taught the students the Yoga Vow. Then the students and teachers together practiced various yoga asanas including Surya Namaskar, Tadasana, Vrikshasana, Bhujangasana, Vajrasana and Pranayama with discipline and enthusiasm. At the end, the yoga teacher made everyone resolve to practice yoga every day.
ದಾವಣಗೆರೆ, ಜೂ. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆ, ರಾಷ್ಟ್ರೋತ್ಥಾನ ವಿದ್ಯಾಲಯ, ರಾಷ್ಟ್ರೋತ್ಥಾನ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ವಿಜಯವಾಣಿ ದಿನಪತ್ರಿಕೆಯ ಸಹಯೋಗದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ವಿಶ್ವ ಸಂಗೀತ ದಿನಾಚರಣೆಯನ್ನು ಆಚರಿಸಲಾಯಿತು. ಈ ವರ್ಷದ ಯೋಗ ದಿನದ ಧ್ಯೇಯವಾಕ್ಯ “ಆರೋಗ್ಯಕರ ವಯೋವೃದ್ಧಿಗಾಗಿ ಯೋಗ” (Yoga for Healthy Ageing) ಆಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಸುಮನ್ ಎನ್.ಎಸ್., ಟೀಚಿಂಗ್ ಅಸಿಸ್ಟೆಂಟ್, ಡಿಪಾರ್ಟ್ಮೆಂಟ್ ಆಫ್ ಸ್ಟಡೀಸ್ ಇನ್ ಯೋಗಿಕ್ ಸೈನ್ಸ್, ಯುನಿವರ್ಸಿಟಿ ಆಫ್ ದಾವಣಗೆರೆ ಹಾಗೂ ವಿಶೇಷ ಅತಿಥಿಗಳಾದ ಶ್ರೀ ನವೀನ್ ಎಂ.ಬಿ., ರೆಸಿಡೆಂಟ್ ಎಡಿಟರ್, ವಿಜಯವಾಣಿ ಪತ್ರಿಕೆ, ಚಿತ್ರದುರ್ಗ ಆವೃತ್ತಿ, ದಾವಣಗೆರೆ ಅವರು ಆಗಮಿಸಿದ್ದರು. ಅನಂತರ 9ನೇ ತರಗತಿಯ ವಿದ್ಯಾರ್ಥಿನಿ ಖುಷಿ ಟಿ.ಪಿ. ಅವರು ವಿಶ್ವ ಸಂಗೀತ ದಿನದ ಪ್ರಯುಕ್ತ ಸಂಗೀತದ ಮಹತ್ವ, ಅದರ ಇತಿಹಾಸ, ಪರಂಪರೆ ಹಾಗೂ ತಮ್ಮ ಸಂಗೀತಾಭ್ಯಾಸದ ಅನುಭವಗಳ ಕುರಿತು ಮಾತನಾಡಿದರು. ನಂತರ 7ನೇ ತರಗತಿಯ ವಿದ್ಯಾರ್ಥಿನಿಯರಾದ ಭೂಮಿಕಾ ಮತ್ತು ಆನ್ವಿ ತಮ್ಮ ಸಹಪಾಠಿಗಳೊಂದಿಗೆ ವಿವಿಧ ಆಕರ್ಷಕ ಯೋಗಾಸನಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮುಖ್ಯ ಅತಿಥಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ಯೋಗಃ ಕರ್ಮಸು ಕೌಶಲಮ್” ಹಾಗೂ “ಸಮತ್ವಂ ಯೋಗ ಉಚ್ಯತೇ” ಎಂಬ ಭಗವದ್ಗೀತೆಯ ಸಂದೇಶಗಳನ್ನು ಉಲ್ಲೇಖಿಸಿ ಯೋಗದ ಮಹತ್ವ, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಅದರ ಸಕಾರಾತ್ಮಕ ಪರಿಣಾಮಗಳು ಮತ್ತು ಯೋಗ-ಧ್ಯಾನದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಪಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು.
ಶಿಕ್ಷಕರೂ ಸಹ ಯೋಗದ ಮಹತ್ವ ಹಾಗೂ ಅದರ ಆರೋಗ್ಯಕರ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಯೋಗ ಶಿಕ್ಷಕರಾದ ಶ್ರೀಮತಿ ಗೀತಾ ಅವರು ಯೋಗ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಸೂರ್ಯ ನಮಸ್ಕಾರ, ತಾಡಾಸನ, ವೃಕ್ಷಾಸನ, ಭುಜಂಗಾಸನ, ವಜ್ರಾಸನ ಸೇರಿದಂತೆ ವಿವಿಧ ಯೋಗಾಸನಗಳನ್ನು ಹಾಗೂ ಪ್ರಾಣಾಯಾಮವನ್ನು ಶಿಸ್ತುಬದ್ಧವಾಗಿ ಮತ್ತು ಉತ್ಸಾಹದಿಂದ ಅಭ್ಯಾಸ ಮಾಡಿದರು. ಕೊನೆಯಲ್ಲಿ ಯೋಗ ಶಿಕ್ಷಕರು ಪ್ರತಿಯೊಬ್ಬರೂ ಪ್ರತಿದಿನ ಯೋಗಾಭ್ಯಾಸ ಮಾಡುವ ಸಂಕಲ್ಪವನ್ನು ಮಾಡಿಸಿದರು.

















