Davanagere, May 27: Rashtrotthana Vidya Kendra – Davangere and Rashtrotthana Gokulam – Davangere jointly organised a “Aksharabhyasa and Vidyarambha” program for pre-primary children.
• Puja rituals were performed with the chanting of Vedic mantras under the leadership of the Chief Priest Sri Chidambaram Bhat.
• Sri Jayanna, Administrator of Rashtrotthana Parishat, Bengaluru, members of CBSE North Zone Schools and Secretary of Rashtrotthana Educational Institutions – Davangere, gave information about the various service activities of Rashtrotthana Parishat in his introductory speech. In addition, he touched the hearts of the children about the importance of literacy in their lives, the need for cultured education and the need for value-based education.
• The literacy program was successfully conducted under the Divine Presence of Swami Atma Deepanandaji Maharaj.
• In his blessing, the venerable one explained the sanctity of the beginning of education in Indian culture, the importance of culture-rich education and the need to instil good values in children.
• Kumari Jyoti sang the hymn of praise without hesitation.
• The literacy chants were performed by Smt. Aishwarya.
ದಾವಣಗೆರೆ, ಮೇ 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆ ಹಾಗೂ ರಾಷ್ಟ್ರೋತ್ಥಾನ ಗೋಕುಲಂ – ದಾವಣಗೆರೆ ಇವರ ಸಹಯೋಗದಲ್ಲಿ ಪೂರ್ವ ಪ್ರಾಥಮಿಕ ಮಕ್ಕಳಿಗಾಗಿ ಹಮ್ಮಿಕೊಳ್ಳಲಾದ “ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ” ಕಾರ್ಯಕ್ರಮವು ನೆರವೇರಿತು.
• ಪ್ರಧಾನ ಅರ್ಚಕರಾದ ಶ್ರೀ ಚಿದಂಬರ ಭಟ್ ಅವರ ನೇತೃತ್ವದಲ್ಲಿ ವೇದಮಂತ್ರಗಳ ಘೋಷಗಳೊಂದಿಗೆ ಪೂಜಾ ಕೈಂಕರ್ಯಗಳು ನೆರವೇರಿದವು.
• ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು ಆಡಳಿತಾಧಿಕಾರಿಗಳು, ಸಿಬಿಎಸ್ಇ ಉತ್ತರ ವಲಯ ಶಾಲೆಗಳ ಸದಸ್ಯರು ಹಾಗೂ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಗಳ ದಾವಣಗೆರೆ ಕಾರ್ಯದರ್ಶಿಗಳಾದ ಶ್ರೀ ಜಯಣ್ಣ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ವಿವಿಧ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಜೊತೆಗೆ, ಮಕ್ಕಳ ಜೀವನದಲ್ಲಿ ಅಕ್ಷರಾಭ್ಯಾಸದ ಮಹತ್ವ, ಸಂಸ್ಕಾರಯುತ ಶಿಕ್ಷಣದ ಅಗತ್ಯತೆ ಹಾಗೂ ಮೌಲ್ಯಾಧಾರಿತ ವಿದ್ಯಾಭ್ಯಾಸದ ಅಗತ್ಯತೆ ಕುರಿತು ಮನಮುಟ್ಟುವಂತೆ ತಿಳಿಸಿದರು.
• ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಸ್ವಾಮಿ ಆತ್ಮ ದೀಪಾನಂದಾಜಿ ಮಹಾರಾಜ್ ಅವರ ನೇತೃತ್ವದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.
• ಪೂಜ್ಯರು ತಮ್ಮ ಆಶೀರ್ವಚನದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ವಿದ್ಯಾರಂಭದ ಪಾವಿತ್ರ್ಯ, ಸಂಸ್ಕಾರಭರಿತ ಶಿಕ್ಷಣದ ಮಹತ್ವ ಹಾಗೂ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಅಗತ್ಯತೆಯನ್ನು ವಿವರಿಸಿದರು.
• ಕುಮಾರಿ ಜ್ಯೋತಿ ಅವರು ಶಾರದೆ ಸ್ತುತಿ ಗೀತೆಯನ್ನು ಹಾಡಿದರು.
• ಅಕ್ಷರಾಭ್ಯಾಸದ ಮಂತ್ರಘೋಷಗಳನ್ನು ಶ್ರೀಮತಿ ಐಶ್ವರ್ಯ ಅವರು ನೆರವೇರಿಸಿದರು.

















