Davangere, Apr. 4: A cow protection campaign was conducted herein Rashtrotthana Vidya Kendra – Davangere. Dr. Mouna Yogi Vishwanath Devar, Kashi, participated as the Chief Guest in the program and gave important information about cow protection. He explained the importance of raising desi cows and inspired the students to grow up to be doctors, engineers and farmers in the future. He said that by raising cows in every household, one can lead a healthy life and explained the uses of milk and cow-related products. He emphasized that cow protection is an important aspect of our culture and health.

ದಾವಣಗೆರೆ, ಏ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಗೋ ಸಂರಕ್ಷಣಾ ಅಭಿಯಾನವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಡಾ. ಮೌನ ಯೋಗಿ ವಿಶ್ವನಾಥ ದೇವರು, ಕಾಶಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗೋಸಂರಕ್ಷಣೆ ಕುರಿತಾಗಿ ಮಹತ್ವದ ಮಾಹಿತಿಯನ್ನು ನೀಡಿದರು. ಅವರು ದೇಸಿ ಹಸುಗಳನ್ನು ಸಾಕುವ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ವೈದ್ಯರು, ಅಭಿಯಂತರರ ಜೊತೆಗೆ ಕೃಷಿಕರಾಗಿಯೂ ಬೆಳೆಯಬೇಕು ಎಂದು ಪ್ರೇರಣೆ ನೀಡಿದರು. ಪ್ರತಿಯೊಂದು ಮನೆಯಲ್ಲಿ ಹಸುಗಳನ್ನು ಸಾಕುವ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದು ತಿಳಿಸಿ, ಹಾಲು ಮತ್ತು ಹಸುಗಳಿಗೆ ಸಂಬಂಧಿಸಿದ ಉತ್ಪನ್ನಗಳ ಉಪಯೋಗಗಳ ಬಗ್ಗೆ ವಿವರಿಸಿದರು. ಗೋಸಂರಕ್ಷಣೆ ನಮ್ಮ ಸಂಸ್ಕೃತಿ ಮತ್ತು ಆರೋಗ್ಯದ ಪ್ರಮುಖ ಅಂಶವೆಂದು ಅವರು ಒತ್ತಿ ಹೇಳಿದರು.