Davangere, Sept. 11: World Brotherhood Day was celebrated herein Rashtrotthana Vidya Kendra – Davangere. On this occasion, 132 years have passed since Vivekananda’s speech in Chicago. Krupa S. Nayak, a student of class 5, gave the summary of the speech through her speech. Speaking about Swami Vivekananda, Smt. Girijamba said that he was the first person to convince the world of Indian values and the greatness of Hinduism. He also told the world that “Hindutva is not a religion but a way of life.” His words, which also served as a guide for the historic verdict of our Supreme Court, briefly explained the importance of Vivekananda’s ideas.
ದಾವಣಗೆರೆ, ಸೆ. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ವಿಶ್ವ ಭ್ರಾತೃತ್ವ ದಿನವನ್ನು ಆಚರಿಸಲಾಯಿತು. ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಭಾಷಣಕ್ಕೆ 132 ವರ್ಷಗಳಾದ ಈ ಸಂದರ್ಭದಲ್ಲಿ ಭಾಷಣದ ಸಾರಾಂಶವನ್ನು 5 ನೇ ತರಗತಿಯ ವಿದ್ಯಾರ್ಥಿನಿ ಕೃಪಾ ಎಸ್. ನಾಯಕ ಇವರು ತಮ್ಮ ಭಾಷಣದ ಮೂಲಕ ತಿಳಿಸಿದಳು. ಶ್ರೀಮತಿ ಗಿರಿಜಾಂಬ ಅವರು ಸ್ವಾಮಿ ವಿವೇಕಾನಂದರ ಬಗ್ಗೆ ಮಾತನಾಡುತ್ತಾ ಭಾರತೀಯ ಮೌಲ್ಯಗಳನ್ನು ಮತ್ತು ಹಿಂದೂ ಧರ್ಮದ ಹಿರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮೊದಲ ವ್ಯಕ್ತಿ ಅಲ್ಲದೆ, “ಹಿಂದುತ್ವವೆಂಬುದು ಒಂದು ಧರ್ಮವಲ್ಲ ಜೀವನ ವಿಧಾನವು ಹೌದು” ಎಂದು ಜಗತ್ತಿಗೆ ತಿಳಿಸಿದ ಇವರ ನುಡಿಗಳು ನಮ್ಮ ಸುಪ್ರೀಂ ಕೋರ್ಟ್ ನ ಐತಿಹಾಸಿಕ ತೀರ್ಪಿಗೂ ದಿಗ್ಜೋತಿಯಾಗಿವೆ ಎಂದು ವಿವೇಕಾನಂದರ ವಿಚಾರಗಳ ಮಹತ್ವದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.

