Davangere, Jan. 24: Ratha Saptami festival was celebrated herein Rashtrotthana Vidya Kendra – Davangere. Student Sinchan A. gave information about the significance of Ratha Saptami and explained the spiritual, cultural and health-related significance of this festival.
Students performed Surya Namaskar in a group. After Surya Namaskar, Sri Shambhulingappa, the convener of R.V.K. addressed the gathering and explained the significance of Ratha Saptami and said that the sun is the source of energy, health and life. He advised the students to follow a disciplined daily life and understand the value of Surya Namaskar. Sri Vinayak Ranade, a member of R.V.K. also addressed the gathering and strongly emphasized the importance of doing Surya Namaskar every day, saying that regular practice develops physical health, mental fortitude, discipline and concentration. He encouraged the students to adopt Surya Namaskar in their daily routine for a healthy and balanced life.
ದಾವಣಗೆರೆ, ಜ. 24: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ದಾವಣಗೆರೆಯಲ್ಲಿ ರಥಸಪ್ತಮಿ ಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿನಿ ಸಿಂಚನ ಎ. ಅವರು ರಥಸಪ್ತಮಿಯ ಮಹತ್ವದ ಕುರಿತು ಮಾಹಿತಿ ನೀಡುತ್ತ ಈ ಹಬ್ಬದ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಆರೋಗ್ಯ ಸಂಬಂಧಿತ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳಿಂದ ಸಮೂಹವಾಗಿ ಸೂರ್ಯ ನಮಸ್ಕಾರವನ್ನು ಪ್ರದರ್ಶಿಸಿದರು. ಸೂರ್ಯ ನಮಸ್ಕಾರದ ನಂತರ ಆರ್.ವಿ.ಕೆ. ಸಂಸ್ಥೆಯ ಸಂಚಾಲಕರಾದ ಶ್ರೀ ಶಂಭುಲಿಂಗಪ್ಪ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ರಥಸಪ್ತಮಿಯ ಮಹತ್ವವನ್ನು ವಿವರಿಸಿ, ಸೂರ್ಯನು ಶಕ್ತಿ, ಆರೋಗ್ಯ ಮತ್ತು ಜೀವನದ ಮೂಲವೆಂದು ತಿಳಿಸಿದರು. ವಿದ್ಯಾರ್ಥಿಗಳು ಶಿಸ್ತುಬದ್ಧ ದೈನಂದಿನ ಜೀವನವನ್ನು ಅನುಸರಿಸಿ ಸೂರ್ಯ ನಮಸ್ಕಾರದ ಮೌಲ್ಯವನ್ನು ಅರಿಯಬೇಕು ಎಂದು ಅವರು ಸಲಹೆ ನೀಡಿದರು. ಆರ್.ವಿ.ಕೆ. ಸದಸ್ಯರಾದ ಶ್ರೀ ವಿನಾಯಕ ರಾನಡೆ ಅವರು ಸಹ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರ ಮಹತ್ವವನ್ನು ಬಲವಾಗಿ ಒತ್ತಿ ಹೇಳಿ, ನಿಯಮಿತ ಅಭ್ಯಾಸದಿಂದ ದೈಹಿಕ ಆರೋಗ್ಯ, ಮಾನಸಿಕ ಸ್ಥೈರ್ಯ, ಶಿಸ್ತು ಮತ್ತು ಏಕಾಗ್ರತೆ ಬೆಳೆಯುತ್ತದೆ ಎಂದು ತಿಳಿಸಿದರು. ಆರೋಗ್ಯಕರ ಹಾಗೂ ಸಮತೋಲನಯುತ ಜೀವನಕ್ಕಾಗಿ ಸೂರ್ಯ ನಮಸ್ಕಾರವನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.







