Davangere, Sept. 13: Capacity Building Program “Gender Sensitivity in Schools under Capacity Building Program” was organized for teachers herein Rashtrotthana Vidya Kendra – Davangere.
Program Objectives
• To create awareness of gender equality among teachers.
• Adopting gender sensitivity in the teaching process.
• Develop skills to combat gender-based discrimination.
• Strengthening the role of teachers to inculcate equality and respect among students.
Key milestones of the program
Sri Sachin Kumar, Principal, Kattigehalli Matha Public School, Ranebennur and Smt. Sriranjini S., Aditya Birla, Public School Kumar, Pattanam Haveri, visited the school as resource persons. Methodologies were presented.
Dialogue and Discussion: Teachers shared their experiences and discussed best practices that can be used in the classroom.
ದಾವಣಗೆರೆ, ಸೆ. 13 ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಸಾಮರ್ಥ್ಯವೃದ್ಧಿ ಕಾರ್ಯಕ್ರಮವನ್ನು (Capacity Building Program) “ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಶಾಲೆಯಲ್ಲಿ ಲಿಂಗ ಸಂವೇದನೆ” ಕಾರ್ಯಕ್ರಮವನ್ನು ಶಿಕ್ಷಕರಿಗಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ದೇಶಗಳು
ಶಿಕ್ಷಕರಲ್ಲಿ ಲಿಂಗ ಸಮಾನತೆ ಕುರಿತು ಅರಿವು ಮೂಡಿಸುವುದು.
ಬೋಧನಾ ಪ್ರಕ್ರಿಯೆಯಲ್ಲಿ ಲಿಂಗ ಸಂವೇದನೆ ಅಳವಡಿಸುವುದು.
ಲಿಂಗ ಆಧಾರಿತ ಭೇದಭಾವ ನಿವಾರಣೆ ಮಾಡುವ ನೈಪುಣ್ಯ ಬೆಳೆಸುವುದು.
ವಿದ್ಯಾರ್ಥಿಗಳಲ್ಲಿ ಸಮಾನತೆ ಮತ್ತು ಗೌರವದ ಮನೋಭಾವ ಬೆಳೆಸಲು ಶಿಕ್ಷಕರ ಪಾತ್ರವನ್ನು ಬಲಪಡಿಸುವುದು.
ಕಾರ್ಯಕ್ರಮದ ಪ್ರಮುಖ ಹಂತಗಳು
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದಂತಹ ಶ್ರೀ ಸಚಿನ್ ಕುಮಾರ್ ಕಟ್ಟಿಗೆಹಳ್ಳಿ ಮಠ ಪಬ್ಲಿಕ್ ಸ್ಕೂಲ್ ರಾಣೇಬೆನ್ನೂರು ಪ್ರಾಂಶುಪಾಲರು ಹಾಗೂ ಶ್ರೀಮತಿ ಶ್ರೀರಂಜಿನಿ ಎಸ್ ಆದಿತ್ಯ ಬಿರ್ಲಾ ಪಬ್ಲಿಕ್ ಸ್ಕೂಲ್ ಕುಮಾರ ಪಟ್ಟಣಂ ಹಾವೇರಿ ಇವರು ಶಾಲಾ ಮಟ್ಟದಲ್ಲಿ ಲಿಂಗ ಸಂವೇದನೆ ಬೆಳೆಸುವ ವಿಧಾನಗಳು, ಹಾಗೂ ಕಾರ್ಯಪದ್ಧತಿಗಳನ್ನು ಪ್ರಸ್ತುತಪಡಿಸಿದರು.
ಸಂವಾದ ಮತ್ತು ಚರ್ಚೆ : ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಂಡು, ತರಗತಿಯಲ್ಲಿ ಬಳಸಬಹುದಾದ ಉತ್ತಮ ಕಾರ್ಯಪದ್ಧತಿಗಳನ್ನು ಚರ್ಚಿಸಿದರು.




