Davanagere, Aug. 15: Rashtrotthana Vidya Kendra, Rashtrotthana Vidyalaya and Rashtrotthana Composite PU College – Davanagere jointly celebrated India’s 80th Independence Day. The Chief Guest for the program was Smt. Radhika B. R., Regional Director, CBSE Regional Centre – Davanagere.
- Vande Mataram was sung by everyone together.
- Then Sri Venkatesh presented the guest of honour as a mark of respect and welcome to the dignitaries.
The Chief Guest hoisted the flag. Everyone sang the national anthem together.
- The students conducted a march past.
- Krupa S. of Class 6 Nayak spoke on the importance of Independence Day, the sacrifices of freedom fighters and the responsibilities of young citizens in nation-building.
- College student Greeshma Hegde shared inspiring thoughts on patriotism, national development and the role of youth in shaping the future of India.
- Students presented a diverse cultural programme.
- Chief Guest Smt. Radhika B. R. In her inspiring speech, she explained the importance of Independence Day and inspired the students to become responsible, disciplined and socially conscious citizens. She encouraged the students to achieve excellence in education, uphold Indian values and make a positive contribution to society.
ದಾವಣಗೆರೆ, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ರಾಷ್ಟ್ರೋತ್ಥಾನ ವಿದ್ಯಾಲಯ ಹಾಗೂ ರಾಷ್ಟ್ರೋತ್ಥಾನ ಕಾಂಪೋಸಿಟ್ ಪಿಯು ಕಾಲೇಜು, ದಾವಣಗೆರೆ ಇವರು ಸಂಯುಕ್ತವಾಗಿ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಶ್ರೀಮತಿ ರಾಧಿಕಾ ಬಿ. ಆರ್. ಪ್ರಾದೇಶಿಕ ನಿರ್ದೇಶಕರು, CBSE ಪ್ರಾದೇಶಿಕ ಕೇಂದ್ರ, ದಾವಣಗೆರೆ ಇವರು ಆಗಮಿಸಿದ್ದಾರೆ.
- ಎಲ್ಲರೂ ಒಟ್ಟಾಗಿ ವಂದೇ ಮಾತರಂ ಹಾಡಲಾಯಿತು.
- ನಂತರ ಗಣ್ಯರಿಗೆ ಗೌರವ ಹಾಗೂ ಸ್ವಾಗತ ಸೂಚಕವಾಗಿ ಶ್ರೀ ವೆಂಕಟೇಶ್ ಅತಿಥಿ ಪ್ರಣಾಮವನ್ನು ಪ್ರಸ್ತುತಪಡಿಸಿದರು.
ಮುಖ್ಯ ಅತಿಥಿಯವರು ಧ್ವಜಾರೋಹಣವನ್ನು ನೆರವೇರಿಸಿ ರಾಷ್ಟ್ರಗೀತೆ ಹಾಡಲಾಯಿತು.
- ವಿದ್ಯಾರ್ಥಿಗಳು ಮಾರ್ಚ್ಪಾಸ್ಟ್ ನಡೆಸಿದರು.
- 6ನೇ ತರಗತಿಯ ಕೃಪಾ ಎಸ್. ನಾಯಕ್ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ದೇಶದ ನಿರ್ಮಾಣದಲ್ಲಿ ಯುವ ನಾಗರಿಕರ ಜವಾಬ್ದಾರಿಗಳ ಕುರಿತು ಭಾಷಣ ಮಾಡಿದಳು.
- ಕಾಲೇಜು ವಿದ್ಯಾರ್ಥಿನಿ ಗ್ರೀಷ್ಮಾ ಹೆಗಡೆ ಅವರು ದೇಶಭಕ್ತಿ, ರಾಷ್ಟ್ರದ ಅಭಿವೃದ್ಧಿ ಹಾಗೂ ಭಾರತದ ಭವಿಷ್ಯ ರೂಪಿಸುವಲ್ಲಿ ಯುವಕರ ಪಾತ್ರದ ಕುರಿತು ಪ್ರೇರಣಾದಾಯಕ ವಿಚಾರಗಳನ್ನು ಹಂಚಿಕೊಂಡರು.
- ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.
- ಮುಖ್ಯ ಅತಿಥಿಗಳಾದ ಶ್ರೀಮತಿ ರಾಧಿಕಾ ಬಿ. ಆರ್. ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಅವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ಜವಾಬ್ದಾರಿಯುತ, ಶಿಸ್ತುಬದ್ಧ ಮತ್ತು ಸಾಮಾಜಿಕ ಕಾಳಜಿಯುಳ್ಳ ನಾಗರಿಕರಾಗಬೇಕೆಂದು ಪ್ರೇರೇಪಿಸಿದರು. ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಸಾಧಿಸುವುದರ ಜೊತೆಗೆ ಭಾರತೀಯ ಮೌಲ್ಯಗಳನ್ನು ಕಾಪಾಡಿಕೊಂಡು ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.







