Davanagere, Jan. 26: Rashtrotthana Vidya Kendra –Davanagere, Rashtrotthana Vidyalaya and Rashtrotthana Samyukta Pre-University College jointly celebrated the 77th Republic Day. Sri Manu A S, Associate Professor, Department of Community Medicine, Davanagere was the chief guest and hoisted the flag. The guests were respectfully invited to the stage by the students’ parade, Ghosh and NCC team.
🔸 Student Atharva A G remembered the importance of the Constitution and the sacrifices of the national leaders.
🔸 Student Pratiksha (Rashtroththan Vidyalaya) spoke clearly about the background of the adoption of the Constitution and a self-reliant India.
🔸 Student Purvi K G spoke about the importance of Republic Day and explained that the Constitution is the source of strength, unity and progress of our country. He said that every citizen should enhance the respect of the country by adhering to the values of the Constitution.
In his speech, the chief guest, Sri Manu A. S. Professor, spoke about the sovereignty of India, the democratic system and the sacrifices of the soldiers who protect it. He said that social responsibility, progress in technology and the creation of a self-reliant India are necessary to preserve and develop freedom. He remembered the brave women of India, social workers and the rich culture of India and praised India as a proud nation. In his presidential speech, Sri Jayanna, a member of the Governing Body and Secretary of the Rashtrotthana Institutes, explained the importance of the Republic Day, the sacrifices of the freedom fighters and the need for nationalism. Saying that our Constitution is the guide of the country, he declared “Our India is the best India”. Later, the students of Rashtrotthana Vidya Kendra and Rashtrotthana Vidyalaya conducted cultural programs.
ದಾವಣಗೆರೆ, ಜ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆ, ರಾಷ್ಟ್ರೋತ್ಥಾನ ವಿದ್ಯಾಲಯ ಹಾಗೂ ರಾಷ್ಟ್ರೋತ್ಥಾನ ಸಂಯುಕ್ತ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಮನು ಎ ಎಸ್, ಅಸೋಸಿಯೇಟ್ ಪ್ರೊಫೆಸರ್, ಡಿಪಾರ್ಟ್ಮೆಂಟ್ ಆಫ್ ಕಮ್ಯುನಿಟಿ ಮೆಡಿಸಿನ್, ದಾವಣಗೆರೆ ಇವರು ಆಗಮಿಸಿ ಧ್ವಜಾರೋಹಣವನ್ನು ನೆರವೇರಿಸಿದರು. ಅತಿಥಿಗಳನ್ನು ವಿದ್ಯಾರ್ಥಿಗಳ ಕವಾಯತು, ಘೋಷ್ ಮತ್ತು ಎನ್ ಸಿ ಸಿ ತಂಡದವರು ಗೌರವಪೂರ್ವಕವಾಗಿ ವೇದಿಕೆಗೆ ಆಹ್ವಾನಿಸಿದರು.
🔸 ವಿದ್ಯಾರ್ಥಿ ಅಥರ್ವ ಎ ಜಿ ರವರು ಸಂವಿಧಾನದ ಮಹತ್ವ ಹಾಗೂ ರಾಷ್ಟ್ರ ನಾಯಕರ ತ್ಯಾಗಗಳನ್ನು ಸ್ಮರಿಸಿದರು.
🔸 ವಿದ್ಯಾರ್ಥಿನಿ ಪ್ರತಿಕ್ಷ (ರಾಷ್ಟ್ರೋತ್ಥಾನ ವಿದ್ಯಾಲಯ) ರವರು ಸಂವಿಧಾನ ಅಂಗೀಕಾರದ ಹಿನ್ನೆಲೆ ಮತ್ತು ಆತ್ಮನಿರ್ಭರ ಭಾರತ ಕುರಿತು ಸ್ಪಷ್ಟವಾಗಿ ಮಾತನಾಡಿದರು.
🔸 ವಿದ್ಯಾರ್ಥಿನಿ ಪೂರ್ವಿ ಕೆ ಜಿ ರವರು ಗಣರಾಜ್ಯೋತ್ಸವದ ಮಹತ್ವ ಕುರಿತು ಮಾತನಾಡಿ, ಸಂವಿಧಾನವೇ ನಮ್ಮ ದೇಶದ ಶಕ್ತಿ, ಏಕತೆ ಹಾಗೂ ಪ್ರಗತಿಗೆ ಮೂಲ ಎಂದು ವಿವರಿಸಿದರು. ಪ್ರತಿಯೊಬ್ಬ ನಾಗರಿಕನು ಸಂವಿಧಾನ ಮೌಲ್ಯಗಳನ್ನು ಪಾಲಿಸುವ ಮೂಲಕ ದೇಶದ ಗೌರವವನ್ನು ಹೆಚ್ಚಿಸಬೇಕು ಎಂದು ತಮ್ಮ ಮಾತುಗಳಲ್ಲಿ ತಿಳಿಸಿದರು. ಮುಖ್ಯ ಅತಿಥಿಗಳಾದ ಮನು ಎ ಎಸ್ ಪ್ರೊಫೆಸರ್ ರವರು ತಮ್ಮ ಭಾಷಣದಲ್ಲಿ,ಭಾರತದ ಸಾರ್ವಭೌಮತೆ, ಪ್ರಜಾಸತ್ತಾತ್ಮಕ ವ್ಯವಸ್ಥೆ ಹಾಗೂ ಅದನ್ನು ಕಾಪಾಡುತ್ತಿರುವ ಸೈನಿಕರ ತ್ಯಾಗಗಳ ಕುರಿತು ಮಾತನಾಡಿದರು. ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಲು ಸಾಮಾಜಿಕ ಜವಾಬ್ದಾರಿ, ತಂತ್ರಜ್ಞಾನದಲ್ಲಿ ಪ್ರಗತಿ ಹಾಗೂ ಸ್ವಾವಲಂಬಿ ಭಾರತದ ನಿರ್ಮಾಣ ಅಗತ್ಯವೆಂದು ತಿಳಿಸಿದರು. ಭಾರತದ ವೀರವನಿತೆಯರು, ಸಮಾಜ ಸೇವಕರು ಹಾಗೂ ಭಾರತದ ಶ್ರೀಮಂತ ಸಂಸ್ಕೃತಿಯನ್ನು ನೆನಪಿಸಿಕೊಂಡು, ಭಾರತ ಹೆಮ್ಮೆಯ ರಾಷ್ಟ್ರವೆಂದು ಕೊಂಡಾಡಿದರು. ಅಧ್ಯಕ್ಷೀಯ ಭಾಷಣದಲ್ಲಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ರಾಷ್ಟ್ರೋತ್ಥಾನ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಜಯಣ್ಣ ಅವರು ಗಣರಾಜ್ಯೋತ್ಸವದ ಮಹತ್ವ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ರಾಷ್ಟ್ರೀಯತೆಯ ಅಗತ್ಯತೆಯನ್ನು ವಿವರಿಸಿದರು. ನಮ್ಮ ಸಂವಿಧಾನವೇ ದೇಶದ ಮಾರ್ಗದರ್ಶಿ ಎಂದು ಹೇಳಿ, “ನಮ್ಮ ಭಾರತ ಶ್ರೇಷ್ಠ ಭಾರತ” ಎಂದು ಘೋಷಿಸಿದರು. ನಂತರ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಮತ್ತು ರಾಷ್ಟ್ರೋತ್ಥಾನ ವಿದ್ಯಾಲಯದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.









