Davangere, Jan. 23: Keeping in mind the academic progress and intellectual development of the students of class 10 and Vasant Panchami, a Sharada Puja program was organized herein Rashtrotthana Vidya Kendra – Davangere. Explaining the importance of Vasant Panchami, Smt. Varada explained that this festival is a symbol of knowledge, education and culture, and the importance of worshiping Goddess Sharada was explained to the children in an easy-to-understand manner. With the aim of ensuring that the students of class 10 get knowledge, concentration and success in their studies, a special puja was performed with devotion under the leadership of Sri Chidambar Bhat. Then, Vice Principal Sri Shashidhar Biradar addressed the children. Then, Sri Seshadri Rao spoke about the students and gave the message that success in life can be achieved only through hard work, discipline and self-confidence.

ದಾವಣಗೆರೆ, ಜ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ವಸಂತ ಪಂಚಮ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಬೌದ್ಧಿಕ ವಿಕಾಸವನ್ನು ಗಮನದಲ್ಲಿಟ್ಟುಕೊಂಡು ಶಾರದ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಸಂತ ಪಂಚಮಿಯ ಮಹತ್ವವನ್ನು ವಿವರಿಸುತ್ತಾ ಶ್ರೀಮತಿ ವರದ ಅವರು, ಈ ಹಬ್ಬವು ಜ್ಞಾನ, ವಿದ್ಯೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದ್ದು, ಶಾರದ ದೇವಿಯ ಆರಾಧನೆಯ ಮಹತ್ವವನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಜ್ಞಾನ, ಏಕಾಗ್ರತೆ ಮತ್ತು ಯಶಸ್ಸು ದೊರೆಯಲಿ ಎಂಬ ಉದ್ದೇಶದಿಂದ ಶಾರದ ದೇವಿಗೆ ವಿಶೇಷ ಪೂಜೆಯನ್ನು ಶ್ರೀ ಚಿದಂಬರ್ ಭಟ್ ರವರ ನೇತೃತ್ವದಲ್ಲಿ ಭಕ್ತಿಪೂರ್ಣವಾಗಿ ನೆರವೇರಿಸಲಾಯಿತು. ನಂತರ ಉಪ ಪ್ರಾಂಶುಪಾಲರಾದ ಶ್ರೀ ಶಶಿಧರ್ ಬಿರಾದರ್ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು ನಂತರ ಶ್ರಿ ಶೇಷಾದ್ರಿ ರಾವ್ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ, ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸದಿಂದಲೇ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂಬ ಸಂದೇಶವನ್ನು ನೀಡಿದರು.