Davanagere, Jan.: A student from Rashtrotthana Vidya Kendra – Davangere, Neeraj A. M., has been chosen as one of the 100 winners nationwide in the 3rd to 5th class category of the Veer Gatha 5.0 competition. This event is organized under the Gallantry Award Portal of India by the Indian Defence Department in partnership with the Indian Education Departments. In this competition, a total of one crore 92 lakh students from approximately one lakh 90 thousand schools participated across various subjects in four categories. The artwork submitted by Neeraj A. M. in the painting category has been selected and awarded a prize. He has received an invitation as a special invitee to the Republic Day ceremony in Delhi to accept his award. The presentation will take place on stage in the presence of National Défense Minister Rajnath Singh, National Education Minister Dharmendra Pradhan, and the nation’s top military leaders.
ದಾವಣಗೆರೆ, ಜ.: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯ ವಿದ್ಯಾರ್ಥಿ ನೀರಜ್ ಎ. ಎಮ್. ಭಾರತೀಯ ರಕ್ಷಣಾ ಇಲಾಖೆಯ ಭಾಗವಾಗಿ ಭಾರತೀಯ ಶಿಕ್ಷಣ ಇಲಾಖೆಗಳ ಜೊತೆಗೆ ಸಹಯೋಗದಲ್ಲಿ ಗ್ಯಾಲಂಟರಿ ಅವಾರ್ಡ್ ಪೋರ್ಟಲ್ ಆಫ್ ಇಂಡಿಯಾ ಅಡಿಯಲ್ಲಿ ಆಯೋಜಿಸಲಾದ ವೀರ ಗಾಥಾ 5.0 ಸ್ಪರ್ಧೆಯಲ್ಲಿ ದೇಶದ 100 ವಿಜೇತರಲ್ಲಿ 3 ರಿಂದ 5ನೇ ತರಗತಿ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಸುಮಾರು ಒಂದು ಲಕ್ಷದ 90 ಸಾವಿರ ಶಾಲೆಗಳಿಂದ ಒಂದು ಕೋಟಿ 92 ಲಕ್ಷ ವಿದ್ಯಾರ್ಥಿಗಳು 4 ವಿಭಾಗಗಳಲ್ಲಿ ವಿವಿಧ ವಿಷಯಗಳಲ್ಲಿ ಭಾಗವಹಿಸಿದ್ದರು. ಚಿತ್ರಕಲಾ ಕ್ಷೇತ್ರದಲ್ಲಿ ನೀರಜ್ ಎ ಎಮ್ ಸಲ್ಲಿಸಿದ ಚಿತ್ರವು ಆಯ್ಕೆಯಾಗಿದ್ದು ಬಹುಮಾನ ಲಭಿಸಿರುತ್ತದೆ. ಬಹುಮಾನವನ್ನು ಪಡೆಯಲು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಹ್ವಾನಿಸಲಾಗಿದೆ . ರಾಷ್ಟ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಹಾಗೂ ರಾಷ್ಟ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ ರವರು ಹಾಗೂ ದೇಶದ ಸೇನಾ ಸರ್ವೋಚ್ಚ ನಾಯಕರುಗಳು ಉಪಸ್ಥಿತರ ವೇದಿಕೆಯಲ್ಲಿ, ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.




