Davanagere, Jan. 10: To celebrate National Youth Day and the birth anniversary of Swami Vivekananda, a blood donation camp was organized herein Rashtrotthana Vidya Kendra – Davangere. The event was held in collaboration with Rashtrotthana Vidya Kendra and Rashtrotthana Vidyalaya.The blood donation camp was inaugurated by Dr. Nandish, Pathologist and Dr. Chandan.Sri Jayanna, Secretary of Davanagere Rashtrotthana Schools, spoke about the importance of blood donation and inspired the youth. In this camp, donors participated voluntarily and made a valuable contribution to saving human lives by donating blood. A total of 129 parents donated blood. 129 units of blood were collected.
ದಾವಣಗೆರೆ, ಜ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ, ರಾಷ್ಟ್ರೀಯ ಯುವ ದಿನದ ಪ್ರಯುಕ್ತ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಹಾಗೂ ರಾಷ್ಟ್ರೋತ್ಥಾನ ವಿದ್ಯಾಲಯದ ಸಹಕಾರದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.ರಕ್ತದಾನ ಶಿಬಿರವನ್ನು ಡಾಕ್ಟರ್ ನಂದೀಶ್, ಪ್ಯಾಥೋಲಾಜಿಸ್ಟ್ ಮತ್ತು ಡಾಕ್ಟರ್ ಚಂದನ್ ಉದ್ಘಾಟನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಾವಣಗೆರೆ ರಾಷ್ಟ್ರೋತ್ಥಾನ ಶಾಲೆಗಳ ಕಾರ್ಯದರ್ಶಿಗಳಾದ ಶ್ರೀ ಜಯಣ್ಣ ರಕ್ತದಾನದ ಮಹತ್ವದ ಕುರಿತು ಮಾತನಾಡಿ ಯುವಕರಿಗೆ ಪ್ರೇರಣೆ ನೀಡಿದರು. ಈ ಶಿಬಿರದಲ್ಲಿ ದಾನಿಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವ ಜೀವ ರಕ್ಷಣೆಗೆ ಅಮೂಲ್ಯ ಕೊಡುಗೆ ನೀಡಿದರು. ಒಟ್ಟಾರೆ 129 ಪೋಷಕರು ರಕ್ತದಾನ ಮಾಡಿದರು. 129 ಯೂನಿಟ್ ರಕ್ತವು ಸಂಗ್ರಹವಾಗಿದೆ.









