‘With a mentor guiding from behind and a goal to strive for ahead, there is nothing you cannot achieve’

Davangere, July 20: Sri Rajesh Padmar, leader of RSS, said this while addressing the children on Gurupurnima organized in Rashtrotthana Vidya Kendra – Davangere.The program was started with lamp lighting and flower laying on the portrait of Guru Vedavyas and prayer song “Sri Guruve Aruve Saranaagi Baruve. Karuneyannu Kori Baruve”.The children were fascinated by Gautama Buddha, Vyasaraya, Dronacharya, Ramakrishna Paramahamsa, Chanakya, and so on in the guise of gurus. Children told importance of Gurupurnima through speech.Children stepped to the song ‘Guru Brahma Guru Vishnu Guru Devo Maheshwarah’.

“ಮುಂದೆ ಗುರಿ ಇದ್ದು ಹಿಂದೆ ಗುರುವಿದ್ದರೆ ನೀವು ಏನ್ನನ್ನಾದರೂ ಸಾಧಿಸಬಲ್ಲಿರಿ”
ದಾವಣಗೆರೆ, ಜುಲೈ 20: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಶ್ರೀ ರಾಜೇಶ್ ಪದ್ಮಾರ್ ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಆಯೋಜಿಸಿದ ಗುರುಪೂರ್ಣಿಮೆಯಂದು ಮಕ್ಕಳನ್ನುದ್ದೇಶಿಸಿ ಮಾತನಾಡುತ್ತ ಹೀಗೆ ಹೇಳಿದರು. ಗುರು ವೇದವ್ಯಾಸರ ಭಾವಚಿತ್ರಕ್ಕೆ ದೀಪ ಪ್ರಜ್ವಲನೆ ಹಾಗೂ ಪುಷ್ಪಾರ್ಚನೆ ಮಾಡುವ ಮತ್ತು “ಶ್ರೀ ಗುರುವೇ ಅರುವೆ ಶರಣಾಗಿ ಬರುವೆ.ಕರುಣೆಯನು ಕೋರಿ ಬರುವೆ ” ಎಂಬ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪುಟ್ಟಮಕ್ಕಳು ಗೌತಮಬುದ್ಧ, ವ್ಯಾಸರಾಯರು, ದ್ರೋಣಾಚಾರ್ಯರು, ರಾಮಕೃಷ್ಣ ಪರಮಹಂಸ, ಚಾಣಕ್ಯ, ಹೀಗೆ ಗುರುಗಳ ಛದ್ಮವೇಷದಲ್ಲಿ ಮನಸೆಳೆದರು. ಗುರುಪೂರ್ಣಿಮೆಯ ವಿಶೇಷತೆಯನ್ನು ಭಾಷಣದ ಮೂಲಕ ಮಕ್ಕಳು ತಿಳಿಸಿದರು. ‘ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ’ ಎಂಬ ಗೀತೆಗೆ ಮಕ್ಕಳು ಹೆಜ್ಜೆ ಹಾಕಿದರು.

Scroll to Top