A Capacity Building Workshop in RVK – Davanagere

Davangere, Sept 16: A capacity building workshop was organized today herein Rashtrotthana Vidya Kendra – Davangere.On the programme, Sri Shambulingappa spoke about teachers saying that learning should be continuous. Then Dr. Gauri Prabha Prasad, Gurukula School Bangalore spoke about Active Education and Child Cantered and Classroom Management. Later Sri Vinayaka, Senior Principal, Bala Vinayaka Vidyaniketana Gadaga, who guided the teachers through teacher participation activities in active learning through Jigsaw method.Gurukula School Bangalore Principal, Dr. Gauri Prabha Prasad, Bala Vinayaka Vidyaniketan Gadag Senior Principal, Sri Vinayaka, Board Member, Sri Shambulingappa, School Principal, Sri Manjunath, Siddaganga School Principal, Gayathri, and Teachers were present in the closing ceremony.

ದಾವಣಗೆರೆ, ಸಪ್ಟೆಂಬರ್ 16: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ದಾವಣಗೆರೆಯಲ್ಲಿ ಇಂದು ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಕುರಿತು ಶ್ರೀ ಶಂಭುಲಿಂಗಪ್ಪ ಅವರು ಕಲಿಕೆ ಎನ್ನುವುದು ನಿರಂತರವಾಗಿರಬೇಕು ಎಂದು ಶಿಕ್ಷಕರನ್ನು ಕುರಿತು ಮಾತನಾಡಿದರು. ನಂತರ ಡಾಕ್ಟರ್ ಗೌರಿ ಪ್ರಭ ಪ್ರಸಾದ್, ಗುರುಕುಲ ಶಾಲೆ ಬೆಂಗಳೂರು, ಇವರು ಸಕ್ರಿಯ ಶಿಕ್ಷಣದ ಕುರಿತು ಮತ್ತು ಮಗು ಕೇಂದ್ರಿತ ಮತ್ತು ತರಗತಿ ನಿರ್ವಹಣೆಯ ಬಗ್ಗೆ ತಿಳಿಸಿದರು.ನಂತರದಲ್ಲಿ ಶ್ರೀ ವಿನಾಯಕ, ಹಿರಿಯ ಪ್ರಾಂಶುಪಾಲರು, ಬಾಲ ವಿನಾಯಕ ವಿದ್ಯಾನಿಕೇತನ, ಗದಗ, ಇವರು ಜಿಗ್ಸಾದ ಪದ್ಧತಿಯ ಮೂಲಕ ಸಕ್ರಿಯ ಕಲಿಕೆಯಲ್ಲಿ ಶಿಕ್ಷಕರ ಪಾಲ್ಗೊಳ್ಳುವಿಕೆ ಚಟುವಟಿಕೆಗಳ ಮೂಲಕ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.ಸಮಾರೋಪ ಸಮಾರಂಭದಲ್ಲಿ ಗುರುಕುಲ ಶಾಲೆ, ಬೆಂಗಳೂರು ಇದರ ಪ್ರಾಂಶುಪಾಲರಾದ ಡಾಕ್ಟರ್ ಗೌರಿ ಪ್ರಭ ಪ್ರಸಾದ್, ಬಾಲ ವಿನಾಯಕ ವಿದ್ಯಾನಿಕೇತನ ಗದಗ ಹಿರಿಯ ಪ್ರಾಂಶುಪಾಲರಾದ ಶ್ರೀ ವಿನಾಯಕ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ಶಂಭುಲಿಂಗಪ್ಪ, ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಮಂಜುನಾಥ್, ಸಿದ್ದಗಂಗಾ ಶಾಲೆಯ ಪ್ರಾಂಶುಪಾಲರಾದ ಗಾಯತ್ರಿ, ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Scroll to Top