UNNATI – 2025-26 Admission Commencement Ceremony in RVK – Davanagere

Davangere, October 12: Online and Offline Admission Commencement Program for the year 2025-26 was held on Vijayadashami herein Rashtrotthana Vidya Kendra – Davangere. The ceremony started with traditional Saraswati Puja led by Sri Chidambara Bhat. Prayers were offered after the puja. Later, Sri Shambulingappa said the importance of this occasion in his introductory remarks. He said the school values upholding its commitment to holistic education. He emphasized the mission of the school to inculcate not only academic excellence but also moral and cultural values in the students. In his presidential address, Sri Vinayak Ranade highlighted the importance of year-on-year growth of the school, continuous efforts to provide students with a balanced and rich education, and innovation. He encouraged the parents to be actively involved in the opportunities offered by the school.

ದಾವಣಗೆರೆ, ಅಕ್ಟೋಬರ್ 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ದಾವಣಗೆರೆಯಲ್ಲಿ ವಿಜಯದಶಮಿಯಂದು 2025-26ನೇ ಸಾಲಿನ ಆನ್ಲೈನ್ ಮತ್ತು ಆಫ್ಲೈನ್ ಪ್ರವೇಶಾತಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಚಿದಂಬರ ಭಟ್ ಅವರ ನೇತೃತ್ವದಲ್ಲಿ ಸಾಂಪ್ರದಾಯಿಕ ಸರಸ್ವತಿ ಪೂಜೆಯೊಂದಿಗೆ ಸಮಾರಂಭವು ಪ್ರಾರಂಭವಾಯಿತು. ಪೂಜೆಯ ಬಳಿಕ ಪ್ರಾರ್ಥನೆಯನ್ನು ಮಾಡಲಾಯಿತು. ಬಳಿಕ ಶ್ರೀ ಶಂಭುಲಿಂಗಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ ಈ ಸಂದರ್ಭದ ಮಹತ್ತ್ವವನ್ನು ಹೇಳಿದರು. ಸಮಗ್ರ ಶಿಕ್ಷಣದ ಕುರಿತ ತನ್ನ ಬದ್ಧತೆಯನ್ನು ಎತ್ತಿಹಿಡಿಯುವ ಮೌಲ್ಯವನ್ನು ಶಾಲೆ ಹೊಂದಿದೆ ಎಂದರು. ಶೈಕ್ಷಣಿಕ ಉತ್ಕೃಷ್ಟತೆಯನ್ನು ಮಾತ್ರವಲ್ಲದೆ, ವಿದ್ಯಾರ್ಥಿಗಳಲ್ಲಿ ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನೂ ಬಿತ್ತಿ ಬೆಳೆಯುವ ಶಾಲೆಯ ಉದ್ದೇಶವನ್ನು ಒತ್ತಿ ಹೇಳಿದರು. ಅಧ್ಯಕ್ಷೀಯ ನುಡಿಗಳನ್ನಾಡುತ್ತ ಶ್ರೀ ವಿನಾಯಕ ರಾನಡೆ ಅವರು ವರ್ಷವರ್ಷವೂ ಶಾಲೆಯ ಬೆಳವಣಿಗೆ, ವಿದ್ಯಾರ್ಥಿಗಳಿಗೆ ನೀಡುವ ನಿರಂತರ ಪ್ರಯತ್ನಗಳ ಬಗ್ಗೆ ಸಮತೋಲಿತ ಮತ್ತು ಸಮೃದ್ಧ ಶಿಕ್ಷಣ, ಆವಿಷ್ಕಾರದ ಮಹತ್ವವನ್ನು ಅವರು ಎತ್ತಿ ತೋರಿಸಿದರು. ಪೋಷಕರು ಶಾಲೆಯು ನೀಡುವ ಅವಕಾಶಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರು.

Scroll to Top