‍Felicitation to Dr. Babu Krishnamurthy in RVK – Davanagere

Dr. Babu Krishnamurthy’s service to literature and journalism is immense, unique. Several awards have been given to the author for his achievements in the field of agriculture. We are blessed to have a man of such simplicity in our midst: Sri Jayanna: Babu Krishnamurthy felicitations at the felicitation ceremony. Davangere, Aug 13: On the occasion of the 50th anniversary of ‘Ajeya’ and 40th anniversary of ‘Adamya’ herein Rashtrotthana Vidya Kendra – Davangere, a felicitation ceremony was held for the author of the works, Dr. Babu Krishnamurthy. Sri Jayanna, Secretary of the organization, addressed the audience. Later, Sri Vigneshwara Bhat, the Editor of Rashtrotthana Sahitya, introduced Rashtrotthana Sahitya and talked about the speciality of ‘Ajeya’ and ‘Adhamya’.Sri A H Shivayogi and Sri S R Hegde and present dignitaries were honoured Dr. Babu Krishnamurthy. The Authors who received the honour spoke about the greatness of Kannada literature and the factors that inspired them to create their works.

ಡಾ. ಬಾಬು ಕೃಷ್ಣಮೂರ್ತಿ ಅವರು ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ನೀಡಿರುವ ಸೇವೆ ಅಪಾರ, ಅನನ್ಯ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಲೇಖಕರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಇಂಥಹ ಒಬ್ಬ ಸರಳತೆಯ ವ್ಯಕ್ತಿ ನಮ್ಮ ಮಧ್ಯ ಇದ್ದಾರೆ ಎಂಬುದು ನಮ್ಮ ಪುಣ್ಯ: ಶ್ರೀ ಜಯಣ್ಣ: ಡಾ. ಬಾಬು ಕೃಷ್ಣಮೂರ್ತಿ ಅಭಿನಂದನಾ ಸಮಾರಂಭದಲ್ಲಿ ಅಭಿಮತ.ದಾವಣಗೆರೆ, ಆಗಸ್ಟ್ 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ‘ಅಜೇಯ’ ಕೃತಿಗೆ 50ರ ಸಂಭ್ರಮ ಹಾಗೂ ‘ಅದಮ್ಯ’ ಕೃತಿಗೆ 40ರ ಸಂಭ್ರಮದ ಸಂದರ್ಭದಲ್ಲಿ ಕೃತಿಗಳ ಲೇಖಕ ಡಾ. ಬಾಬು ಕೃಷ್ಣಮೂರ್ತಿ ಅವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಜಯಣ್ಣ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿದರು. ಬಳಿಕ ರಾಷ್ಟ್ರೋತ್ಥಾನ ಸಾಹಿತ್ಯ ಸಂಪಾದಕರಾದ ಶ್ರೀ ವಿಘ್ನೇಶ್ವರ ಭಟ್ ಅವರು ರಾಷ್ಟ್ರೋತ್ಥಾನ ಸಾಹಿತ್ಯವನ್ನು ಪರಿಚಯಿಸಿ, ಅದಮ್ಯ ಹಾಗೂ ಅಜೇಯ ಕೃತಿಗಳ ವಿಶೇಷತೆಯನ್ನು ಕುರಿತು ತಿಳಿಸಿದರು.ಡಾ. ಬಾಬು ಕೃಷ್ಣಮೂರ್ತಿ ಅವರನ್ನು ಶ್ರೀ ಎ. ಎಚ್. ಶಿವಯೋಗಿ ಹಾಗೂ ಶ್ರೀ ಎಸ್. ಆರ್. ಹೆಗಡೆ ಹಾಗೂ ಉಪಸ್ಥಿತಿ ಗಣ್ಯರು ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿದ ಲೇಖಕರು ಮಾತನಾಡಿ ಕನ್ನಡ ಸಾಹಿತ್ಯದ ಹಿರಿಮೆಯನ್ನು ಹಾಗೂ ಕೃತಿಗಳನ್ನು ರಚಿಸಲು ಪ್ರೇರೇಪಿಸಿದ ಅಂಶಗಳನ್ನು ತಿಳಿಸಿದರು.

Scroll to Top