Prize to RVK – Davanagere in GKVK Essay Competition

Bengaluru, June 8: Kum. Ganavi G V and Kum. Akanksha D (Class 10) of Rashtrotthana Vidya Kendra – Davanagere, bagged the first and third positions respectively in the GKVK Agricultural University Essay Competition.Hearty Congratulations from Rashtrotthana Parivar.

On the occasion of World Environment Day, Essay Competition was organized on the topic, Soil and Earth Climate Change Effects and on this day the Award was presented in the program organised herein Prof. U R Rao Vigyan Bhavan, Karnataka Science and Technology Academy, GKVK. More than 1500 high school students from across Karnataka participated. First and third prizes are Rs. 5000 and Rs. 2000 in cash as well.

ಬೆಂಗಳೂರು, ಜೂನ್ 8: ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಪ್ರಬಂಧ ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯ ಕುಮಾರಿ ಗಾನವಿ ಜಿ ವಿ ಹಾಗೂ ಕುಮಾರಿ ಆಕಾಂಕ್ಷ ಡಿ (10ನೇ ತರಗತಿ) ಕ್ರಮವಾಗಿ ಪ್ರಥಮ ಹಾಗೂ ತೃತೀಯ ಸ್ಥಾನವನ್ನು ಪಡೆದಿದ್ದಾರೆ.ರಾಷ್ಟ್ರೋತ‍್ಥಾನ ಪರಿವಾರದಿಂದ ಹಾರ್ದಿಕ ಶುಭಾಶಯಗಳು.

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಮಣ್ಣು ಮತ್ತು ಭೂಮಿಯ ಹವಾಮಾನ ಬದಲಾವಣೆಯ ಪರಿಣಾಮಗಳು ಎಂಬ ವಿಷಯವಾಗಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿ, ಈ ದಿನ ಜಿಕೆವಿಕೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರೊ. ಯು. ಆರ್. ರಾವ್ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕದಾದ್ಯಂತದ ಸುಮಾರು 1500ಕ್ಕೂ ಹೆಚ್ಚಿನ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಹಾಗೂ ತೃತೀಯ ಬಹುಮಾನಗಳು ಕ್ರಮವಾಗಿ ರೂ. 5000 ಹಾಗೂ ರೂ. 2000 ನಗದನ್ನೂ ಒಳಗೊಂಡಿತ್ತು.

Scroll to Top