Davangere, Nov. 6: Vigilance awareness week program was celebrated herein Rashtrotthana Vidya Kendra – Davangere in collaboration with Postal Department. Chief Superintendent of Posts Sri Chandrasekhar, Assistant Superintendents of Posts Sri Guruprasad, and Sri Narendra Nayak, Public Relations Inspector Sri Venkataramaniah participated in the program. Sri Guruprasad preached the Pledge of Allegiance and shared weekly information to make the students aware of corruption. Pick and speak competition was organized for high school students. More than thirty students actively participated. Kumari Deepti G. Bistanagoudar bagged the first prize, Kumar Abhishek bagged the second prize and Kumari Sahana bagged the third prize.
ದಾವಣಗೆರೆ, ನ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಅಂಚೆ ಇಲಾಖೆಯ ಸಹಯೋಗದೊಂದಿಗೆ Vigilance Awareness Week (ಜಾಗೃತಿ-ಜಾಗೃತ ಸಪ್ತಾಹ) ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಮುಖ್ಯ ಅಧೀಕ್ಷಕರಾದ ಶ್ರೀ ಚಂದ್ರಶೇಖರ್, ಸಹಾಯಕ ಅಂಚೆ ಅಧೀಕ್ಷಕರುಗಳಾದ ಶ್ರೀ ಗುರುಪ್ರಸಾದ್, ಮತ್ತು ಶ್ರೀ ನರೇಂದ್ರ ನಾಯಕ್, ಸಾರ್ವಜನಿಕ ಸಂಪರ್ಕ ನಿರೀಕ್ಷಕರಾದ ಶ್ರೀ ವೆಂಕಟರಮಣಯ್ಯ ಅವರುಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರದ ಕುರಿತು ಅರಿವು ಮೂಡಿಸುವ ಸಲುವಾಗಿ ಶ್ರೀ ಗುರುಪ್ರಸಾದ್ ಅವರು ಪ್ರತಿಜ್ಞಾವಿಧಿ ಬೋಧಿಸಿ, ಸಪ್ತಾಹದ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಆಶು ಭಾಷಣ’ (Pick and Speak) ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರಿಯಾಶೀಲವಾಗಿ ಭಾಗವಹಿಸಿದರು. ಕುಮಾರಿ ದೀಪ್ತಿ ಜಿ. ಬಿಸ್ತನಗೌಡರ್ ಪ್ರಥಮ, ಕುಮಾರ ಅಭಿಷೇಕ್ ದ್ವೀತಿಯ ಮತ್ತು ಕುಮಾರಿ ಸಹನ ತೃತೀಯ ಬಹುಮಾನ ಗಳಿಸಿದರು.