Davangere, Feb. 1: Vasant Panchami was celebrated herein Rashtrotthana Vidya Kendra- Davangere. The seventh-grade students performed the prayer “Karunisi Poraye Sharada Mata…” under the guidance of Smt. Veena Prasad. Smt. Aishwarya explained to the children the special of Vasant Panchami, the changes that occur in nature, and the importance of Vasant Panchami in Indian tradition.
ದಾವಣಗೆರೆ, ಫೆ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ- ದಾವಣಗೆರೆಯಲ್ಲಿ ವಸಂತ ಪಂಚಮಿಯನ್ನು ಆಚರಿಸಲಾಯಿತು. ಏಳನೇ ತರಗತಿ ಮಕ್ಕಳು ಕರುಣಿಸಿ ಪೊರೆಯೇ ಶಾರದಾ ಮಾತೆ… ಎಂಬ ಪ್ರಾರ್ಥನೆಯನ್ನು ಶ್ರೀಮತಿ ವೀಣಾ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನೆರವೇರಿಸಿದರು. ವಸಂತ ಪಂಚಮಿಯ ವಿಶೇಷತೆಯನ್ನು, ಪ್ರಕೃತಿಯಲ್ಲಿ ಆಗುವ ಬದಲಾವಣೆಯನ್ನು, ಭಾರತೀಯ ಪರಂಪರೆಯಲ್ಲಿ ವಸಂತ ಪಂಚಮಿಯ ಮಹತ್ತ್ವವನ್ನು ಶ್ರೀಮತಿ ಐಶ್ವರ್ಯ ಅವರು ಮಕ್ಕಳಿಗೆ ತಿಳಿಸಿಕೊಟ್ಟರು.