Home > News & Events >The 76th Republic Day Celebration in RVK – Davanagere
Davanagere, Jan. 26: The 76th Republic Day was celebrated herein Rashtrotthana Vidya Kendra – Davanagere. After the Flag Hoisting and the National Anthem, the students of Rashtrotthana Vidya Kendra paid tribute to the event by marching. The children sang a patriotic group song. Kumari Suhasini delivered a speech on the importance of Republic Day. The CBSE students performed a dance performance on Ambedkar’s achievements. The students of Rashtrotthana Vidyalaya expressed unity in diversity through their dance.The students of Rashtrotthana Vidyalaya delivered a speech commemorating the Constitution. The students of Rashtrotthana Vidyalaya gave a call to always be ready to serve the country through their dance.The students of Rashtrotthana Vidya Kendra performed a dance called Vande Bharat. Kumar Sumant Hegde of First PUC gave a speech on the introduction of the Constitution and the celebration of this day.Industrialist Sri M. Anand, who arrived as the chief guest for the program, called for the work of nation building through his guest speech. Sri Jayanna, in his presidential address, called for the sacred duty of nation building and to put it into practice.
ದಾವಣಗೆರೆ, ಜ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ 76 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣ ಮತ್ತು ರಾಷ್ಟ್ರಗೀತೆಯ ಬಳಿಕ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ವಿದ್ಯಾಥಿ೯ ವೃಂದದವರು ಪಥಸಂಚಲನ ಮೂಲಕ ಕಾಯ೯ಕ್ರಮಕ್ಕೆ ಗೌರವ ಸಲ್ಲಿಸಿದರು. ದೇಶಭಕ್ತಿಯ ಸಮೂಹ ಗೀತೆಯನ್ನು ಮಕ್ಕಳು ಹಾಡಿದರು. ಕುಮಾರಿ ಸುಹಾಸಿನಿ ಗಣರಾಜ್ಯೋತ್ಸವದ ಮಹತ್ತ್ವದ ಕುರಿತು ಭಾಷಣ ಮಾಡಿದಳು. ಅಂಬೇಡ್ಕರವರ ಕಾಯ೯ಸಾಧನೆ ಕುರಿತು ನೃತ್ಯ ರೂಪಕವನ್ನು ಸಿಬಿಎಸ್ ಸಿ ವಿದ್ಯಾಥಿ೯ ವೃಂದದವರು ಪ್ರದರ್ಶಿಸಿದರು. ರಾಷ್ಟ್ರೋತ್ಥಾನ ವಿದ್ಯಾಲಯದ ವಿದ್ಯಾಥಿ೯ ವೃಂದದವರು ವಿಭಿನ್ನತೆಯಲ್ಲಿ ಏಕತೆಯನ್ನು ತಮ್ಮ ನೃತ್ಯದ ಮೂಲಕ ವ್ಯಕ್ತಪಡಿಸಿದರು. ಸಂವಿಧಾನವನ್ನು ಸ್ಮರಿಸುವ ಭಾಷಣವನ್ನು ರಾಷ್ಟ್ರೋತ್ಥಾನ ವಿದ್ಯಾಲಯದ ವಿದ್ಯಾಥಿ೯ಗಳು ಮಾಡಿದರು. ದೇಶಸೇವೆಗೆ ಸದಾ ಸನ್ನದ್ಧರಾಗಿರಲು ಕರೆಯನ್ನು ರಾಷ್ಟ್ರೋತ್ಥಾನ ವಿದ್ಯಾಲಯದ ವಿದ್ಯಾಥಿ೯ ವೃಂದದವರು ತಮ್ಮ ನೃತ್ಯದ ಮೂಲಕ ನೀಡಿದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾಥಿ೯ ವೃಂದದವರು ವಂದೇ ಭಾರತ ಎಂಬ ನೃತ್ಯವನ್ನು ಪ್ರದಶಿ೯ಸಿದರು. ಪ್ರಥಮ ಪಿಯುಸಿಯ ಕುಮಾರ ಸುಮಂತ ಹೆಗಡೆ ಸಂವಿಧಾನದ ಪರಿಚಯ ಹಾಗೂ ಈ ದಿನದ ಆಚರಣೆ ಕುರಿತು ಭಾಷಣ ಮಾಡಿದನು. ಕಾಯ೯ಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೈಗಾರಿಕೋದ್ಯಮಿ ಶ್ರೀಯುತ ಎಮ್. ಆನಂದರವರು ಅತಿಥಿ ಭಾಷಣದ ಮೂಲಕ ದೇಶಕಟ್ಟುವ ಕೆಲಸ ಮಾಡಲು ಕರೆ ನೀಡಿದರು. ಅಧ್ಯಕ್ಷೀಯ ಭಾಷಣದಲ್ಲಿ ದೇಶ ಕಟ್ಟಲು ಪವಿತ್ರವಾದ ಕತ೯ವ್ಯ ಭಾವನೆಯನ್ನು ಹೊಂದಲು ಮತ್ತು ಕಾಯ೯ರೂಪಕ್ಕೆ ತರಲು ಶ್ರೀಯುತ ಜಯಣ್ಣ ಅವರು ಕರೆ ನೀಡಿದರು.