Teacher’s Day celebration in RVK – Davanagere

Davangere, Sept 5: Rashtrotthana Vidya Kendra – Davangere celebrated Teacher’s Day in collaboration with Rashtrotthana Vidyalaya -Davanagere during Dr. Sarvepalli Radhakrishnan’s birth anniversary.In the program the portrait of Dr. Sarvepalli Radhakrishnan was lit and flowers were offered. The teachers of Rashtrotthana Vidya Kendra and Rashtrotthana Vidyalaya sang melodiously in the program. Sri Basavarajappa, who came as a guest in this program, spoke about the professional development of teachers and the skills that teachers should have. Sri Jayanna, the secretary of the organization, explained the true meaning of the word Guru and what should be the goal of the teachers of our organization? He congratulated the teachers for their work.The educators of Rashtrotthana Vidyalaya showcased the narratives of Shivaji and Samarth Ramdas, who renowned for their unwavering devotion to their Guru. Subsequently, the instructors from Rashtrotthana Vidya Kendra delivered a presentation on the life and achievements of Ahilyabai Holkar.The book was gifted to all the teachers of Rashtrotthana Vidya Kendra, Rashtrotthana Vidyalaya and Rashtrotthana Samyukta Pre-Graduation College.

ದಾವಣಗೆರೆ, ಸಪ್ಟೆಂಬರ್ 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆ, ರಾಷ್ಟ್ರೋತ್ಥಾನ ವಿದ್ಯಾಲಯ – ದಾವಣಗೆರೆಯ ಸಹಯೋಗದಲ್ಲಿ ಈ ದಿನ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್‍ರವರ ಜಯಂತಿಯ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿತು.ಕಾರ್ಯಕ್ರಮದಲ್ಲಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ದೀಪಪ್ರಜ್ವಲನ ಹಾಗೂ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಗೂ ರಾಷ್ಟ್ರೋತ್ಥಾನ ವಿದ್ಯಾಲಯದ ಶಿಕ್ಷಕರು ಸುಮಧುರವಾಗಿ ಹಾಡಿದರು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಬಸವರಾಜಪ್ಪ ಗುರೂಜಿಯವರು ಶಿಕ್ಷಕರ ವೃತ್ತಿ ಬೆಳವಣಿಗೆ ಹಾಗೂ ಶಿಕ್ಷಕರಿಗೆ ಇರಬೇಕಾದ ಕೌಶಲ್ಯಗಳ ಕುರಿತು ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಜಯಣ್ಣ ಅವರು ಗುರು ಎಂಬ ಪದದ ನಿಜವಾದ ಅರ್ಥವನ್ನು ಹಾಗೂ ನಮ್ಮ ಸಂಸ್ಥೆಯ ಶಿಕ್ಷಕರ ಗುರಿ ಹೇಗಿರಬೇಕು? ಎಂದು ತಿಳಿಸುತ್ತಾ ಶಿಕ್ಷಕರ ಕಾರ್ಯವೈಖರಿಗೆ ಅಭಿನಂದಿಸಿದರು. ರಾಷ್ಟ್ರೋತ್ಥಾನ ವಿದ್ಯಾಲಯದ ಶಿಕ್ಷಕರು ಗುರುಭಕ್ತಿಗೆ ಹೆಸರಾದ ಶಿವಾಜಿ ಹಾಗೂ ಸಮರ್ಥ ರಾಮದಾಸರ ಪ್ರಸoಗವನ್ನು ಪ್ರಸ್ತುತ ಪಡಿಸಿದರು. ಆನಂತರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಶಿಕ್ಷಕರು ರಾಷ್ಟ್ರಮಾತೆ ಅಹಿಲ್ಯಾಬಾಯಿ ಹೋಳ್ಕರ್ ಅವರ ಜೀವನ ಚರಿತ್ರೆಯನ್ನು ಪ್ರಸ್ತುತ ಪಡಿಸಿದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ರಾಷ್ಟ್ರೋತ್ಥಾನ ವಿದ್ಯಾಲಯ ಹಾಗೂ ರಾಷ್ಟ್ರೋತ್ಥಾನ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಲ್ಲ ಶಿಕ್ಷಕರಿಗೂ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಯಿತು.

Scroll to Top