Sri Krishna Janmashtami in RVK – Davanagere

Davangere, Aug. 16: Sri Krishna Janmashtami was celebrated today in
collaboration with Rashtrotthana Vidya Kendra – Davanagere and
Gokulam School.Dr. Renuka Barki, Professor, Pediatric Ophthalmologist, SSIMS Davangere, was the Chief Guest.The program was inaugurated by worshipping Mother Cow. Under the guidance of Smt. Jyothi, the children of class two and three sang a song about Srirangana. The presenter, Sri Shambhulingappa, gave the introductory remarks. The chief guest spoke proudly about the daily diet of the children, the daily activities and rituals held at Rashtrotthana School. Then he spoke to the parents about the reading of the children and the use of mobile phones to give time to the children. Then he created awareness among the parents about the eyes of the children.Children of Pre-Primary and Class 1 dressed up as Lord Krishna and danced to songs. Children dressed up as Radhe and Krishna participated in a pot-banging program with their parents.Later, prasad was distributed.

ದಾವಣಗೆರೆ, ಆ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆ ಮತ್ತು ಗೋಕುಲಂ ಶಾಲೆಯ ಸಹಭಾಗಿತ್ವದಲ್ಲಿ ಇಂದು ಶ್ರೀ ಕೃಷ್ಣಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ. ರೇಣುಕಾ ಬಾರ್ಕಿ, ಪ್ರಾಧ್ಯಾಪಕರು, ಮಕ್ಕಳ ನೇತ್ರ ಶಾಸ್ತ್ರಜ್ಞರು, ಎಸ್ ಎಸ್ ಐ ಎಮ್ ಎಸ್, ದಾವಣಗೆರೆ, ಇವರು ಆಗಮಿಸಿದ್ದರು. ಕಾರ್ಯಕ್ರಮವನ್ನು ಗೋಮಾತೆಯನ್ನು ಪೂಜಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀಮತಿ ಜ್ಯೋತಿ ಅವರ ಮಾರ್ಗದರ್ಶನದಲ್ಲಿ ಎರಡು ಮತ್ತು ಮೂರನೇ ತರಗತಿಯ ಮಕ್ಕಳು ಶ್ರೀರಂಗನನ್ನು ಕುರಿತು ಹಾಡನ್ನು ಹಾಡಿದರು. ಬಾತ್ಮೀದಾರರಾದ ಶ್ರೀ ಶಂಭುಲಿಂಗಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಮುಖ್ಯ ಅತಿಥಿಗಳು ಮಕ್ಕಳ ದೈನಂದಿನ ಆಹಾರ ಪದ್ಧತಿ, ರಾಷ್ಟ್ರೋತ್ಥಾನ ಶಾಲೆಯಲ್ಲಿ ನಡೆಯುವಂತಹ ದೈನಂದಿನ ಚಟುವಟಿಕೆ ಆಚರಣೆಗಳ ಕುರಿತು ಹೆಮ್ಮೆಯ ಮಾತುಗಳನ್ನು ಹೇಳಿದರು. ನಂತರ ಮಕ್ಕಳ ಓದುಗಾರಿಕೆಯ ಬಗ್ಗೆ ಮೊಬೈಲ್ ಬಳಕೆಯ ಕುರಿತು ಪೋಷಕರಿಗೆ ಮಕ್ಕಳಿಗೆ ಸಮಯ ನೀಡುವಂತೆ ಕಿವಿ ಮಾತನ್ನು ಹೇಳಿದರು. ನಂತರ ಮಕ್ಕಳ ಕಣ್ಣುಗಳ ಬಗ್ಗೆ ಪೋಷಕರಿಗೆ ಜಾಗೃತಿಯನ್ನು ಮೂಡಿಸಿದರು.ಪೂರ್ವ ಪ್ರಾಥಮಿಕ ಮತ್ತು ಒಂದನೇ ತರಗತಿಯ ಮಕ್ಕಳು ಶ್ರೀ ಕೃಷ್ಣ ವೇಶವನ್ನು ಧರಿಸಿ ಹಾಡುಗಳಿಗೆ ನೃತ್ಯವನ್ನು ಮಾಡಿದರು. ರಾಧೆ ಮತ್ತು ಕೃಷ್ಣ ವೇಷ ಧರಿಸಿ ಮಕ್ಕಳು ಮಡಕೆ ಹೊಡೆಯುವ ಕಾರ್ಯಕ್ರಮದಲ್ಲಿ ಪೋಷಕರೊಂದಿಗೆ ಪಾಲ್ಗೊಂಡರು. ನಂತರ ಪ್ರಸಾದವನ್ನು ವಿತರಿಸಲಾಯಿತು.

Scroll to Top