Sanskrit Week in RVK – Davanagere

Davangere, Aug. 1: The first day of Sanskrit Week was celebrated herein Rashtrotthana Vidya Kendra – Davanagere.
On the first day, the introduction of Rashtrotthana School and the introduction of the school prayer in Sanskrit language were performed by primary school children Tejas, Gyanashree and Moksha along with a short play.
Day 2:
Today’s topic: Sanskriti Niti Katha (Moral Stories). Students presented stories and short films. Saying the phrase Paritah Parivartayama, the students of class 6 performed a short play in Sanskrit language to create environmental awareness and understand our responsibility in preserving and developing the environment.
Day 3:
As part of the third day of Sanskrit Week, under the theme of Sanskrit Dialogue, Giridhar of Class 3, Shaurya of Class 6 and Sreenandan of Class 6 translated the richness of Sanskrit language into Kannada in their dialogue.
Day 4:
As part of the fourth day of Sanskrit Week, Arjun of Class 6 and children of Class 2 created awareness of Sanskrit alphabet by singing the alphabet in Sanskrit language in tune with the rhythm and acting.
Day 5:
Students of primary stage performed a dance on Sanskrit devotional songs.
They also performed a short drama showcasing “Vedaghati”, an ancient Indian method of telling time based on the movement of the sun. This highlighted the richness of Indian knowledge heritage (Bharatiya Gyan Parampare).
Conclusion:
On the last day of Sanskrit Week herein Rashtrotthana Vidya Kendra – Davangere, the school students performed a dance celebrating the glory of the Goddess.
Students from various classes demonstrated the importance of Ayurvedic treatment through their short skits.

ದಾವಣಗೆರೆ, ಆ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಸಂಸ್ಕೃತ ಸಪ್ತಾಹದ ಮೊದಲ ದಿನವನ್ನು ಆಚರಿಸಲಾಯಿತು.
ಮೊದಲ ದಿನ ಸಂಸ್ಕೃತ ಭಾಷೆಯಲ್ಲಿ ರಾಷ್ಟ್ರೋತ್ಥಾನ ಶಾಲೆಯ ಪರಿಚಯ ಹಾಗೂ ಶಾಲೆಯ ಪ್ರಾರ್ಥನೆಯ ಪರಿಚಯವನ್ನು ಪ್ರಾಥಮಿಕ ಹಂತದ ಮಕ್ಕಳಾದ ತೇಜಸ್, ಜ್ಞಾನಶ್ರೀ ಹಾಗೂ ಮೋಕ್ಷ ಕಿರುನಾಟಕದೊಂದಿಗೆ ಪ್ರದರ್ಶಿಸಿದರು.
2ನೇ ದಿನ:
ಇಂದಿನ ವಿಷಯ: ಸಂಸ್ಕೃತಿ ನೀತಿ ಕಥೆಗಳು (ನೈತಿಕ ಕಥೆಗಳು)
ವಿದ್ಯಾರ್ಥಿಗಳು ಕಥೆಗಳು ಮತ್ತು ಕಿರುಚಿತ್ರಗಳನ್ನು ಪ್ರಸ್ತುತಪಡಿಸಿದರು. ಪರಿತಃ ಪರಿವರ್ತಯಾಮ ಎಂಬ ವಾಕ್ಯವನ್ನು ಹೇಳುತ್ತಾ ಸಂಸ್ಕೃತ ಭಾಷೆಯಲ್ಲಿ ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಜವಾಬ್ದಾರಿಯನ್ನು ಅರಿತು ಪರಿಸರ ಪ್ರಜ್ಞೆ ಮೂಡಿಸುವ ಕಿರು ನಾಟಕವನ್ನು 6ನೇ ತರಗತಿಯ ವಿದ್ಯಾರ್ಥಿಗಳು ಪ್ರದರ್ಶಿಸಿದರು.
3ನೇ ದಿನ:
ಸಂಸ್ಕೃತ ಸಪ್ತಾಹದ ಮೂರನೇ ದಿನದ ಅಂಗವಾಗಿ ಸಂಸ್ಕೃತ ಸಂಭಾಷಣೆ ಎಂಬ ವಿಷಯದಡಿ 3ನೇ ತರಗತಿಯ ಗಿರಿಧರ್, 6ನೇ ತರಗತಿಯ ಶೌರ್ಯ ಹಾಗೂ ಶ್ರೀನಂದನ್ ಸಂಸ್ಕೃತ ಭಾಷೆಯ ಶ್ರೀಮಂತಿಕೆಯನ್ನು ತಮ್ಮ ಸಂಭಾಷಣೆಯಲ್ಲಿ ಕನ್ನಡಕ್ಕೆ ಅನುವಾದಿಸಿದರು.
4ನೇ ದಿನ:
ಸಂಸ್ಕೃತ ಸಪ್ತಾಹದ ನಾಲ್ಕನೇ ದಿನದ ಅಂಗವಾಗಿ 6ನೇ ತರಗತಿಯ ಅರ್ಜುನ್ ಹಾಗೂ 2ನೇ ತರಗತಿಯ ಮಕ್ಕಳು ಸಂಸ್ಕೃತ ಭಾಷೆಯಲ್ಲಿ ವರ್ಣಮಾಲೆಯನ್ನು ರಾಗ ಬದ್ಧವಾಗಿ ಅಭಿನಯದೊಂದಿಗೆ ಹಾಡುವುದರ ಮೂಲಕ ಸಂಸ್ಕೃತ ವರ್ಣಮಾಲೆಯ ಅರಿವನ್ನು ಮೂಡಿಸಿದರು.
5ನೇ ದಿನ:
ಪ್ರಾಥಮಿಕ ಹಂತದ ವಿದ್ಯಾರ್ಥಿಗಳು ಸಂಸ್ಕೃತದ ಭಕ್ತಿಗೀತೆಯ ನೃತ್ಯವನ್ನು ಪ್ರದರ್ಶಿಸಿದರು. ಅವರು ಸೂರ್ಯನ ಚಲನೆಯ ಆಧಾರದ ಮೇಲೆ ಸಮಯವನ್ನು ಹೇಳುವ ಪ್ರಾಚೀನ ಭಾರತೀಯ ವಿಧಾನವಾದ “ವೇದಘಾಟಿ”ಯನ್ನು ಪ್ರದರ್ಶಿಸುವ ಕಿರು ನಾಟಕವನ್ನು ಸಹ ಪ್ರದರ್ಶಿಸಿದರು. ಇದು ಭಾರತೀಯ ಜ್ಞಾನ ಪರಂಪರೆಯ (ಭಾರತೀಯ ಜ್ಞಾನ ಪರಂಪರೆ) ಶ್ರೀಮಂತಿಕೆಯನ್ನು ಎತ್ತಿ ತೋರಿಸುವಂತಿತ್ತು.
ಸಮಾರೋಪ:
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಸಂಸ್ಕೃತ ಸಪ್ತಾಹದ ಕೊನೆಯ ದಿನ ದೇವಿಯ ಮಹಿಮೆಯನ್ನು ಸಾರುವ ನೃತ್ಯವನ್ನು ಶಾಲೆಯ ವಿದ್ಯಾರ್ಥಿನಿಯರು ಪ್ರದರ್ಶಿಸಿದರು.
ವಿವಿಧ ತರಗತಿ ವಿದ್ಯಾರ್ಥಿಗಳು ಆಯುರ್ವೇದ ಚಿಕಿತ್ಸೆಯ ಮಹತ್ವವನ್ನು ತಮ್ಮ ಕಿರು ರೂಪಕದ ಮೂಲಕ ಪ್ರದರ್ಶಿಸಿದರು.

Scroll to Top