Davangere, Jan. 15: Sankranti festival was celebrated herein Rashtrotthana Vidya Kendra – Davangere by reciting the sun hymn “Bhaskaraya Vidmahe Dinkaraya Dhimahi Tanno Surya Prachodayat”.Sankranti is the festival of bringing Dhanalakshmi home; In token of this, Sri Manjunath, Sri Sashidhar Biradar, and Smt. Rupaswamy started the program by offering pooja to the grain pile.Under the guidance of Smt. Shobha, the children melodiously sang a folk song commemorating Gananayak. 8th class Ku. Vandana explained the background and significance of Sankranti festival in detail. Class 3 children danced to the song “Bangara Tene Teneille” composed by Smt. Deepa.Prasad was distributed at the end of the program.
ದಾವಣಗೆರೆ, ಜ. 15: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ದಾವಣಗೆರೆಯಲ್ಲಿ “ಭಾಸ್ಕರಾಯಾ ವಿದ್ಮಹೇ ದಿನಕರಾಯ ಧೀಮಹಿ ತನ್ನೋ ಸೂರ್ಯ ಪ್ರಚೋದಯಾತ್” ಎನ್ನುವ ಸೂರ್ಯನ ಸ್ತೋತ್ರವನ್ನು ಪಠಿಸುತ್ತಾ, ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಧಾನ್ಯಲಕ್ಷ್ಮಿಯನ್ನು ಮನೆಗೆ ಬರ ಮಾಡಿಕೊಳ್ಳುವ ಹಬ್ಬವೇ ಸಂಕ್ರಾಂತಿ; ಇದರ ಪ್ರತೀಕವಾಗಿ ಶ್ರೀ ಮಂಜುನಾಥ್, ಶ್ರೀ ಶಶಿಧರ್ ಬಿರಾದಾರ್, ಹಾಗೂ ಶ್ರೀಮತಿ ರೂಪಾಸ್ವಾಮಿಯವರು ಧಾನ್ಯದ ರಾಶಿಗೆ ಪೂಜೆಯನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಶ್ರೀಮತಿ ಶೋಭಾ ಅವರ ಮಾರ್ಗದರ್ಶನದಲ್ಲಿ ಗಣನಾಯಕನನ್ನು ಸ್ಮರಿಸುವ ಜನಪದ ಸಮೂಹ ಗೀತೆಯನ್ನು ಮಕ್ಕಳು ಸುಮಧುರವಾಗಿ ಹಾಡಿದರು. 8ನೇ ತರಗತಿಯ ಕು. ವಂದನಾ ಸಂಕ್ರಾಂತಿ ಹಬ್ಬದ ಹಿನ್ನೆಲೆ ಮತ್ತು ಮಹತ್ತ್ವವನ್ನು ಸವಿವರವಾಗಿ ತಿಳಿಸಿದಳು. ಶ್ರೀಮತಿ ದೀಪಾ ಅವರ ಸಂಯೋಜನೆಯಲ್ಲಿ “ಬಂಗಾರ ತೆನೆ ತೆನೆಯಲ್ಲಿ “ಎಂಬ ಹಾಡಿಗೆ 3ನೇ ತರಗತಿಯ ಮಕ್ಕಳು ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದವನ್ನು ವಿತರಿಸಲಾಯಿತು.