Sankalp Program in RVK – Davanagere

Davangere, Mar. 19: “Sankalp” – the oath-taking ceremony of the tenth-grade students was held herein Rashtrotthana Vidya Kendra – Davangere. Pujyasri Param Pujya Vishwanath Chakravarthy Mahaswamy, Sri Anandavan, Agadi graced the program.The students performed a welcome dance. Sri Jayanna gave his introductory remarks by emphasizing the importance of Sankalp and wishing the children a bright future. The 10th grade children and teachers Sri Halaswamy and Sri Seshadri expressed their feelings. Sri Shashidhar Biradar explained the Sankalp letter distribution program and its special features. Pujyasri Param Pujya Vishwanath Chakravarthy Mahaswamy, Sri Anandavan, Agadi taught the oath to the 10th grade students and said that today’s education lies in the words and actions of the children. Those who cherish culture along with education are good citizens and they are loved by God. He blessed them by saying that we should cultivate the feeling that we are our own. The 10th grade students donated lamps to the 9th grade students.

ದಾವಣಗೆರೆ, ಮಾ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ‘ಸಂಕಲ್ಪ’ ಹತ್ತನೇ ತರಗತಿ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಪೂಜ್ಯಶ್ರೀ ಪರಮಪೂಜ್ಯ ವಿಶ್ವನಾಥ ಚಕ್ರವರ್ತಿ ಮಹಾಸ್ವಾಮಿಗಳು, ಶ್ರೀ ಆನಂದವನ, ಅಗಡಿ ಅವರು ಆಗಮಿಸಿದ್ದರು. ವಿದ್ಯಾರ್ಥಿನಿಯರು ಸ್ವಾಗತ ನೃತ್ಯವನ್ನು ಮಾಡಿದರು. ಶ್ರೀ ಜಯಣ್ಣ ಅವರು ಸಂಕಲ್ಪದ ಮಹತ್ವವನ್ನು ಹಾಗೂ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸುವುದರ ಮೂಲಕ ತಮ್ಮ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. 10ನೇ ತರಗತಿ ಮಕ್ಕಳು ಹಾಗೂ ಶಿಕ್ಷಕರಾದ ಶ್ರೀ ಹಾಲಸ್ವಾಮಿ ಅವರು ಹಾಗೂ ಶ್ರೀ ಶೇಷಾದ್ರಿ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶ್ರೀ ಶಶಿಧರ್ ಬಿರಾದರ್ ಅವರು ಸಂಕಲ್ಪ ಪತ್ರ ವಿತರಣಾ ಕಾರ್ಯಕ್ರಮದ ಜೊತೆಗೆ ಅದರ ವಿಶೇಷತೆಯನ್ನು ತಿಳಿಸಿಕೊಟ್ಟರು. ಪೂಜ್ಯ ಶ್ರೀ ಪರಮಪೂಜ್ಯ ವಿಶ್ವನಾಥ ಚಕ್ರವರ್ತಿ ಮಹಾಸ್ವಾಮಿಗಳು, ಶ್ರೀ ಆನಂದವನ, ಅಗಡಿ ಅವರು 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ, ಇಂದಿನ ಶಿಕ್ಷಣ ಮಕ್ಕಳ ನಡೆ-ನುಡಿಯಲ್ಲಿ ಅಡಗಿದೆ. ಶಿಕ್ಷಣದ ಜೊತೆಗೆ ಸಂಸ್ಕೃತಿಯನ್ನು ಪಾಲನೆ ಮಾಡುವವರು ಉತ್ತಮ ಪ್ರಜೆಗಳು ಮತ್ತು ಅವರು ಭಗವಂತನ ಪ್ರೀತಿಗೆ ಪಾತ್ರರಾಗುತ್ತಾರೆ. ನಾವು ನಮ್ಮವರು ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳಿ ಎಂದು ಆಶೀರ್ವಚನವನ್ನು ನೀಡಿದರು. 10ನೇ ತರಗತಿ ವಿದ್ಯಾರ್ಥಿಗಳು 9ನೇ ತರಗತಿ ವಿದ್ಯಾರ್ಥಿಗಳಿಗೆ ದೀಪ ದಾನವನ್ನು ಮಾಡಿದರು.

Scroll to Top