Davanagere, Nov. 23: Kartika Deepotsava was celebrated herein Rashtrotthana Vidya Kendra – Davanagere. Smt. Aarti Sundaresh, a renowned Homeopathy Doctor and Author from Davanagere, graced the program. Sri Jayanna, the administrative head of Rashtrotthana CBSC Schools of the North Division and the Secretary of Rashtrotthana Vidya Kendra – Davanagere, in his introductory speech, explained the importance of celebrating Kartika Deepotsava in schools, the background of the Deepotsava, and the way of worshipping Saraswati-Lakshmi.
Speaking, the Chief Guest explained the importance of the celebration of Kartika Deepotsava festival in Indian culture against the background of scientific basis. She also praised the culture-rich education at Rashtrotthana Vidya Kendra. The Deepotsava was celebrated by all those present.Ganapati and Bhagwan Shlokas were recited by the students; Bhajans were sung by Matrubharathi; and music teachers Ku. Jyoti and Smt. Veena Prasad performed the song.
ದಾವಣಗೆರೆ, ನ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು. ದಾವಣಗೆರೆಯ ಖ್ಯಾತ ಹೋಮಿಯೋಪಥಿ ವೈದ್ಯರು ಹಾಗೂ ಲೇಖಕರಾದ ಶ್ರೀಮತಿ ಆರತಿ ಸುಂದರೇಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಉತ್ತರ ವಿಭಾಗದ ರಾಷ್ಟ್ರೋತ್ಥಾನ ಸಿಬಿಎಸ್ ಸಿ ಶಾಲೆಗಳ ಆಡಳಿತ ಪ್ರಮುಖರು ಹಾಗೂ ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿಗಳಾದ ಶ್ರೀ ಜಯಣ್ಣ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಶಾಲೆಗಳಲ್ಲಿ ಕಾರ್ತಿಕ ದೀಪೋತ್ಸವವನ್ನು ಆಚರಿಸುವ ಮಹತ್ತ್ವ, ದೀಪೋತ್ಸವದ ಹಿನ್ನೆಲೆ, ಸರಸ್ವತಿ -ಲಕ್ಷ್ಮಿಯರನ್ನು ಆರಾಧಿಸುವ ರೀತಿಯನ್ನು ತಿಳಿಸಿದರು. ಮುಖ್ಯ ಅತಿಥಿಗಳು ಮಾತನಾಡುತ್ತ, ಭಾರತೀಯ ಸಂಸ್ಕೃತಿಯಲ್ಲಿ ಕಾರ್ತಿಕ ದೀಪೋತ್ಸವ ಹಬ್ಬಕ್ಕೆ ಇರುವ ಆಚರಣೆಯ ಮಹತ್ತ್ವವನ್ನು ವೈಜ್ಞಾನಿಕ ನೆಲೆಗಟ್ಟಿನ ಹಿನ್ನೆಲೆಯಲ್ಲಿ ತಿಳಿಸಿದರು. ಹಾಗೆಯೇ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿನ ಸಂಸ್ಕಾರಭರಿತ ಶಿಕ್ಷಣವನ್ನು ಪ್ರಶಂಸಿಸಿದರು. ದೀಪೋತ್ಸವವು ನೆರೆದಿದ್ದ ಸರ್ವರಿಂದ ನೆರೆವೇರಿತು. ವಿದ್ಯಾರ್ಥಿಗಳಿಂದ ಗಣಪತಿ ಹಾಗೂ ಭಗವಾನ್ ಶ್ಲೋಕಗಳು, ಮಾತೃಭಾರತಿಯವರಿಂದ ಭಜನೆಗಳು, ಸಂಗೀತ ಶಿಕ್ಷಕರಾದ ಕುಮಾರಿ ಜ್ಯೋತಿ ಹಾಗೂ ಶ್ರೀಮತಿ ವೀಣಾ ಪ್ರಸಾದ್ ಅವರಿಂದ ಗಾನಸುಧೆಯು ನೆರವೇರಿತು.