Davanagere, D. 13-14: School Annual Day of Kalayaana@24 was celebrated under the theme “Indian World Heritage” herein Rashtrotthana Vidya Kendra – Davanagere.
First day: Dr. Thulasiraman KH, Research Scientist and Principal, Indian Institute of Science, Bengaluru and Sri. Kotresh, Deputy Director, Department of School Education and Literacy, Davanagere, were the chief guests for the first day program. Speaking in the opening speech of the program, Sri. Jayanna, the head of administration of Rashtrotthana CBSC schools of North Division of Karnataka and the Secretary of Rashtrotthana Vidya Kendra – Davanagere, said that Rashtrotthana Parishad is involved in its service work in about 35 projects. He said that it’s work ethic has pervaded all strata of the society. He explained the role of Rashtrotthana Parishad and Vidya Kendras in building a healthy and sustainable society. Recalling the facts about social aspects learned by the students in the personality camp program held in Assam, they introduced diverse cultures. Dr. Tulasi Raman KH, the chief guest while speaking praised the role of Rashtrotthana Vidya Kendra schools in shaping the future citizens of great India and spoke about the optimistic dream of making India a Vishwa Guru in the year 2047 and the developments in the field of science and technology. Another Chief Guest Sri. Kotresh while speaking praised the cultured education, disciplined manners available in Rashtrotthana Vidya Kendra and explained the role of school management, parents and teachers for the all-round development of students. Then three parents were felicitated for posting maximum number of school advertisements on Dussehra WhatsApp Status. Also, the captain and vice-captain of the Kadamba team, who scored the highest marks in Sports in this academic year, were honoured with prizes. In the cultural program, plays, songs and dances were performed on Indian cultural heritage, art-architecture, historical background, scientific research, scholarship, how the nation grew, religious and spiritual history. Ku. Jyoti and a team of students performed Hindustani classical music, Indian yoga heritage under the guidance of Sri Ramesh and Smt. Geeta.
Second day: On the second day of school Annual Day of Kalayaana@24 under the theme “Bharatiya Lok Parampare”, Indian television film and theatre superstars and President of Sanskar Bharati, Karnataka Sri K Suchendra Prasad were the Chief Guests. Sri. Shambhulingappa, the convenor of the school delivered the opening remarks while speaking and mentioned the role of schools in the overall development of the nation by referring to the cultured education provided in Rashtrotthana Vidya Kendra and the social work provided for the all-round development of the students. The Chief Guest Sri. K. Suchendra Prasad, while speaking, reflected on the contributions of Davanagere, the home of Indian education and culture, and outlined the values that should be realistic in the twenty-first century. Celebrating the integrity of national heritage, he spoke about the role of school, teachers and parents in the overall development of students. Later, the six students who brought glory to the school by scoring the best marks in the tenth standard annual examination in the year 2023-24 were felicitated in the presence of their parents and dignitaries on the stage. Tenth class student who was selected for the National Level in the Yoga Competition Ku. Bhagwat Prasad was felicitated. In the cultural programs, plays, songs and dances were performed on Indian cultural heritage, art-architecture, historical background, scientific research, scholarship, the way the nation grew, religious and spiritual history. Sri. Vageesh and a group of students performed tabla.
ದಾವಣಗೆರೆ, ಡಿ. 13-14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ “ಭಾರತೀಯ ಲೋಕ ಪರಂಪರೆ” ಎಂಬ ಶೀರ್ಷಿಕೆಯಡಿಯಲ್ಲಿ ಕಲಾಯಾನ@24ರ ಶಾಲಾ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ಮೊದಲ ದಿನ: ಮೊದಲ ದಿನದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧನ ವಿಜ್ಞಾನಿಗಳು ಹಾಗೂ ಪ್ರಾಂಶುಪಾಲರಾದ ಡಾ.ತುಲಸಿರಾಮನ್ ಕೆ ಎಚ್ ಅವರು ಹಾಗೂ ದಾವಣಗೆರೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ಕೊಟ್ರೇಶ್ ಅವರು ಆಗಮಿಸಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯಲ್ಲಿ ಕರ್ನಾಟಕದ ಉತ್ತರ ವಿಭಾಗದ ರಾಷ್ಟ್ರೋತ್ಥಾನ ಸಿಬಿಎಸ್ ಸಿ ಶಾಲೆಗಳ ಆಡಳಿತ ಪ್ರಮುಖರು ಹಾಗೂ ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿಗಳಾದ ಶ್ರೀ ಜಯಣ್ಣ ಅವರು ಮಾತನಾಡುತ್ತ, ರಾಷ್ಟ್ರೋತ್ಥಾನ ಪರಿಷತ್ ಸುಮಾರು 35 ಪ್ರಕಲ್ಪಗಳಲ್ಲಿ ತನ್ನ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಹಾಗೆ ಸಮಾಜದ ಎಲ್ಲ ಸ್ತರಗಳಲ್ಲಿಯೂ ಸಂಸ್ಕಾರಯುತವಾಗಿ ತನ್ನ ಕಾರ್ಯ ವೈಖರಿಯನ್ನು ವ್ಯಾಪಿಸಿಕೊಂಡಿದೆ ಎಂದರು. ಸ್ವಸ್ಥ ಸುಸ್ಥಿರ ಸಮಾಜ ನಿರ್ಮಾಣಕ್ಕೆ ರಾಷ್ಟ್ರೋತ್ಥಾನ ಪರಿಷತ್ ಮತ್ತು ವಿದ್ಯಾಕೇಂದ್ರಗಳ ಪಾತ್ರವನ್ನು ತಿಳಿಸಿದರು. ಅಸ್ಸಾಂನಲ್ಲಿ ಜರುಗಿದ ವ್ಯಕ್ತಿತ್ವ ಶಿಬಿರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಲಿತ ಸಮಾಜಮುಖಿ ಅಂಶಗಳ ಉಲ್ಲೇಖಿನಿಯ ಸಂಗತಿಗಳನ್ನು ನೆನಪಿಸುತ್ತಾ ವೈವಿಧ್ಯಮಯ ಸಂಸ್ಕೃತಿಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಗಳಾದ ಡಾ.ತುಲಸಿ ರಾಮನ್ ಕೆ ಎಚ್ ಅವರು ಮಾತನಾಡುತ್ತ ಭವ್ಯ ಭಾರತದ ಭಾವಿ ಪ್ರಜೆಗಳನ್ನು ರೂಪಿಸುವಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲೆಗಳ ಪಾತ್ರವನ್ನು ಪ್ರಶಂಸಿಸಿ, 2047ರ ಭವಿಷ್ಯತ್ ಭಾರತವನ್ನು ವಿಶ್ವಗುರುವನ್ನಾಗಿಸುವ ಆಶಾವಾದದ ಕನಸನ್ನು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗಳ ಬಗೆಗೆ ತಿಳಿಸಿದರು. ಮತ್ತೋರ್ವ ಮುಖ್ಯ ಅತಿಥಿಗಳಾದ ಶ್ರೀ ಕೊಟ್ರೇಶ್ ಅವರು ಮಾತನಾಡುತ್ತ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ದೊರೆಯುವ ಸಂಸ್ಕಾರಭರಿತ ಶಿಕ್ಷಣ, ಶಿಸ್ತುಬದ್ದ ಆಚಾರ-ವಿಚಾರಗಳನ್ನು ಪ್ರಶಂಸಿದರು ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಾಲೆಯ ಆಡಳಿತ ಮಂಡಳಿಯವರ, ಪಾಲಕ-ಪೋಷಕರ ಹಾಗು ಶಿಕ್ಷಕರ ಪಾತ್ರವನ್ನು ತಿಳಿಸಿದರು. ನಂತರ ದಸರಾ WhatsApp Status ನಲ್ಲಿ ಅತೀ ಹೆಚ್ಚಿನ ಶಾಲಾ ಜಾಹಿರಾತುಗಳನ್ನು ಪ್ರಕಟಿಸಿದ ಮೂರು ಜನ ಪಾಲಕ-ಪೋಷಕರನ್ನು ಅಭಿನಂದಿಸಲಾಯಿತು. ಹಾಗೆಯೇ ಈ ಶೈಕ್ಷಣಿಕ ವರ್ಷದಲ್ಲಿ ಆಟೋಟಗಳಲ್ಲಿ ಅತೀ ಹೆಚ್ಚಿನ ಅಂಕಗಳಿಸಿದ ಕದಂಬ ತಂಡದ ನಾಯಕ ಹಾಗೂ ಉಪನಾಯಕರಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಪರಂಪರೆ, ಕಲೆ-ವಾಸ್ತುಶಿಲ್ಪ, ಐತಿಹಾಸಿಕ ಹಿನ್ನೆಲೆ, ವೈಜ್ಞಾನಿಕ ಸಂಶೋಧನೆ, ಪಾಂಡಿತ್ಯ, ರಾಷ್ಟ್ರೋತ್ಥಾನ ಬೆಳೆದು ಬಂದ ರೀತಿ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಇತಿಹಾಸದ ಬಗೆಗೆ ಅಭಿನಯಿಸಿದ ನಾಟಕ, ಹಾಡು, ನೃತ್ಯಗಳನ್ನು ಪ್ರದರ್ಶಿಸಲಾಯಿತು. ಕುಮಾರಿ ಜ್ಯೋತಿ ಮತ್ತು ವಿದ್ಯಾರ್ಥಿಗಳ ತಂಡದವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಭಾರತೀಯ ಯೋಗ ಪರಂಪರೆಯನ್ನು ಶ್ರೀ ರಮೇಶ್ ಹಾಗೂ ಶ್ರೀಮತಿ ಗೀತಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಎರಡನೇ ದಿನ: “ಭಾರತೀಯ ಲೋಕ ಪರಂಪರೆ” ಎಂಬ ಶೀರ್ಷಿಕೆಯಡಿಯಲ್ಲಿ ಕಲಾಯಾನ@24ರ ಎರಡನೆಯ ದಿನದ ಶಾಲಾ ವಾರ್ಷಿಕೋತ್ಸವದಂದು ಮುಖ್ಯ ಅತಿಥಿಗಳಾಗಿ ಭಾರತೀಯ ದೂರದರ್ಶನ ಚಲನಚಿತ್ರ ಹಾಗೂ ರಂಗಭೂಮಿಯ ಮೇರುನಟರು ಹಾಗೂ ಕರ್ನಾಟಕದ ಸಂಸ್ಕಾರ ಭಾರತಿಯ ಅಧ್ಯಕ್ಷರು ಶ್ರೀ ಕೆ ಸುಚೇಂದ್ರ ಪ್ರಸಾದ್ ಆಗಮಿಸಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಲೆಯ ಸಂಚಾಲಕರಾದ ಶ್ರೀ ಶಂಭುಲಿಂಗಪ್ಪ ಅವರು ಮಾತನಾಡುತ್ತ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ದೊರೆಯುವ ಸಂಸ್ಕಾರಭರಿತ ಶಿಕ್ಷಣ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನೀಡುವ ಸಮಾಜಮುಖಿ ಕಾರ್ಯಗಳನ್ನು ಉಲ್ಲೇಖಿಸುತ್ತಾ ರಾಷ್ಟ್ರದ ಸಮಗ್ರ ಏಳಿಗೆಯಲ್ಲಿ ಶಾಲೆಗಳ ಪಾತ್ರವನ್ನು ತಿಳಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಕೆ ಸುಚೇಂದ್ರ ಪ್ರಸಾದ್ ಅವರು ಮಾತನಾಡುತ್ತ, ಭಾರತೀಯ ಶಿಕ್ಷಣ ಮತ್ತು ಸಂಸ್ಕೃತಿಗೆ ನೆಲೆಯಾದ ದಾವಣಗೆರೆಯ ಕೊಡುಗೆಗಳನ್ನು ಮೆಲುಕು ಹಾಕಿಕೊಳ್ಳುತ್ತಾ, ಇಪ್ಪತ್ತೊಂದನೆಯ ಶತಮಾನದಲ್ಲಿ ವಾಸ್ತವಿಕವಾಗಿ ಇರಲೇಬೇಕಾದ ಮೌಲ್ಯಗಳನ್ನು ವಿವರಿಸಿದರು. ರಾಷ್ಟ್ರೋತ್ಥಾನ ಪರಂಪರೆಯ ಸಮಗ್ರತೆಯನ್ನು ಕೊಂಡಾಡುತ್ತಾ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆ, ಶಿಕ್ಷಕರು ಹಾಗೂ ಪಾಲಕ-ಪೋಷಕರ ಪಾತ್ರವನ್ನು ತಿಳಿಸಿದರು. ನಂತರ 2023-24 ನೆ ಸಾಲಿನಲ್ಲಿ ಹತ್ತನೆ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದುಕೊಟ್ಟ ಆರು ವಿದ್ಯಾರ್ಥಿಗಳಿಗೆ ಅವರ ಪಾಲಕ-ಪೋಷಕರು ಹಾಗೂ ವೇದಿಕೆಯಲ್ಲಿನ ಗಣ್ಯಾತಿಗಣ್ಯರ ಸಮ್ಮಖದಲ್ಲಿ ಸನ್ಮಾನ ಮಾಡಲಾಯಿತು. ಯೋಗ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಮೆರೆದ ಹತ್ತನೇ ತರಗತಿಯ ವಿದ್ಯಾರ್ಥಿ ಕು. ಭಗವತ್ ಪ್ರಸಾದ್ ನನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾರತೀಯ ಸಾಂಸ್ಕೃತಿಕ ಪರಂಪರೆ, ಕಲೆ-ವಾಸ್ತುಶಿಲ್ಪ, ಐತಿಹಾಸಿಕ ಹಿನ್ನೆಲೆ, ವೈಜ್ಞಾನಿಕ ಸಂಶೋಧನೆ, ಪಾಂಡಿತ್ಯ, ರಾಷ್ಟ್ರೋತ್ಥಾನ ಬೆಳೆದು ಬಂದ ರೀತಿ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಇತಿಹಾಸದ ಬಗೆಗೆ ನಾಟಕ, ಹಾಡು, ನೃತ್ಯಗಳನ್ನು ಪ್ರದರ್ಶಿಸಲಾಯಿತು. ಶ್ರೀ ವಾಗೀಶ್ ಮತ್ತು ವಿದ್ಯಾರ್ಥಿಗಳ ತಂಡದವರು ತಬಲಾ ವಾದನ ನಡೆಸಿಕೊಟ್ಟರು.