Davangere, Jan. 10-11: A two-day Jnanadasoha program was held under the theme ‘Greening Life in the Light of Spirituality’ at Rashtrotthana CBSE Schools Spiritual Festival herein Rashtrotthana Vidya Kendra – Davangere. After the inaugural program Sri Shambulingappa, the convenor of the school delivered the introductory remarks of the program. He also said that today’s spiritual festival is also special and the purpose of this festival is to inculcate the depth of devotion in the students. Pujya Swami Tyageshwaranandaji Maharaj of Ramakrishna Ashram, Davanagere, who graced the program with his Divine Presence, later addressed the students, imparting his blessings. They emphasized the importance of acquiring extensive knowledge throughout one’s academic journey, stating that such knowledge must be continually pursued. Only through this relentless pursuit can a commendable character be developed. Period-1: What is Divine Personality? Paths of Great Personality: Conducted by: Swami Tyageshwaranandaji Maharaj Ji of Ramakrishna Ashram, Davangere. Through the messages of Swami Vivekananda, they told the valuable ways of developing a divine personality and developing a great personality through the light of spirituality. Also, they said that, our mind has an indomitable power. We should learn to keep our minds calm to achieve great things with that power. Period-2: Diligence and Piety Conducted by: Pujya Yarriswami Guruji, Founder of Panchatantra Gurukula, Dharwad and Acharya of Personality Development Camps. There is a divine, supreme devotion and spiritual instinct in every person. They explained interestingly the simple ways of extracting those qualities through current events. Period-3: Ramayana Mahabharata and Charitrya. Conducted by: Davanagere Sanskrit scholar and thinker Sri Venkatagirishacharya The essence of Indian epics lies in every action that a person experiences throughout their life in their thoughtful interaction. They said that all the valuable elements there make everyone’s character rich. Period-4: Spirituality in Indian Art and Architecture Conducted by: Sri Dattatreya N Bhat, Art, History Lecturer and Critic, Davangere Visual Arts College. In drawing Rangoli, in the creation of images and sculptures of Gods and Goddesses, in the construction of houses and temples, our wish is “Loka: Samasta: Sukhino Bhavantu”. This is a good tradition laid down by our ancients. Indians had a mission of selflessness in all their activities. They said that magnificent art and architecture can be seen in every art work created by artists. Period-5: Bhagavad Gita Darshan in daily life Conducted by: Sri Jagannath Nadigere, a senior orator and thinker of Davanagere. In his practical speech, along with the divyadarshan of Prasthanatrayas, he told the important points that Bhagavad Gita plays in everyone’s personal life. Period-6: Bhajan Sandhya Conducted by: Students and all teachers of Divya Sannidhana of Harihareshwar Swami, Harihara. Bhajans performed on the occasion of Vaikuntha Ekadashi. Period-7: Bhagavad Gita and Spirituality Conducted by: Karnataka Rajyotsava awardee and senior resource person Dr. H. B. Manjunath. The Bhagavad Gita is a panacea born with the good intention of forming a spiritual base in a scientific spirit based on the principle of Samasti. They advised everyone to read, understand and adopt. Second day: Period-1: Punyasthal Darshan A view of Sri Raghavendra Kripasram at Punyasthala in Channagiri Taluk of Davangere District. Japa-tapa, homa-havanas were performed in this place which has an assembly of deities. The program was led by retired officers of the Indian Administrative Service and administrators of the Ashram, Dr. NR Sudhakar informed the gathering about the historical background of Punyasthal, the austerities of Sri Raghavendra Guruji, why japa-tapa, homa-havan should be performed every day. Later visited Shantisagara, the second largest lake in Asia and Sri Siddeswaraswamy temple there. Period -2: Spiritual activities Conducted by: Smt. Varada, School Social Science Teacher. They explained the significance of Harihara Naamrita to the students and made them write. Period-3: Moderation for a great life Conducted by: Pujya Mata Yoganandamayi Mataji of Sadhanashram, Davangere. Mataji told the simple ways to be adopted by a person in their empirical messages of Ramakrishna Paramahamsa, Sharada Devi and Vivekananda. Closing Ceremony and Experiential Narrative In the closing speech of the program, Sri Vinayak Ranade, a member of the school, spoke and talked about the ways in which a student can build a valuable life by participating in such ritualistic programs like spiritual festivals. One student from each school shared their experience. Pujya Mata Yoganandamayi Mataji, who presided over the program, conveyed the need of spirituality for a blissful life and wished everyone well.
ದಾವಣಗೆರೆ, ಜ. 10-11: ‘ಆಧ್ಯಾತ್ಮದ ಬೆಳಕಿನಲ್ಲಿ ಜೀವನದ ಹಸಿರು ಹೊನಲು’ ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ರಾಷ್ಟ್ರೋತ್ಥಾನ ಸಿ ಬಿ ಎಸ್ ಇ ಶಾಲೆಗಳ ಆಧ್ಯಾತ್ಮಿಕ ಪರ್ವ ಎರಡು ದಿನಗಳ ಜ್ಞಾನದಾಸೋಹ ಕಾರ್ಯಕ್ರಮವನ್ನು ನಡೆಸಲಾಯಿತು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಲೆಯ ಸಂಚಾಲಕರಾದ ಶ್ರೀ ಶಂಭುಲಿಂಗಪ್ಪ ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳಲ್ಲಿ ಜರುಗುವ ಪ್ರತಿ ಹಬ್ಬಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ. ಹಾಗೇಯೇ ಇಂದಿನ ಆಧ್ಯಾತ್ಮಿಕ ಪರ್ವ ಕೂಡ ವಿಶೇಷವಾಗಿದ್ದು ಭಕ್ತಿ-ಭಾವದ ನೆಲೆಗಟ್ಟಿನ ವ್ಯಾಪಕತೆಯನ್ನು ವಿದ್ಯಾರ್ಥಿಗಳಲ್ಲಿ ಉಣಬಡಿಸುವುದು ಈ ಪರ್ವದ ಉದ್ದೇಶವಾಗಿದೆ ಎಂದು ತಿಳಿಸಿದರು. ನಂತರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ದಾವಣಗೆರೆಯ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್ ಅವರು ವಿದ್ಯಾರ್ಥಿ ಜೀವನದಲ್ಲಿ ವಿದ್ಯೆ ಸಂಪಾದನೆಯಾಗಿರಬೇಕು. ಅದನ್ನು ಹೆಚ್ಚು ಹೆಚ್ಚು ಗಳಿಸಬೇಕು. ಅಂದಾಗ ಮಾತ್ರ ಒಳ್ಳೆಯ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಆಶೀರ್ವದಿಸಿದರು. ಅವಧಿ-೧: ದಿವ್ಯ ವ್ಯಕ್ತಿತ್ವ ಎಂದರೇನು? ಶ್ರೇಷ್ಠ ವ್ಯಕ್ತಿತ್ವದ ಮಾರ್ಗಗಳು: ನಡೆಸಿಕೊಟ್ಟವರು: ದಾವಣಗೆರೆಯ ರಾಮಕೃಷ್ಣ ಆಶ್ರಮದ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್ ಜೀ. ಅಧ್ಯಾತ್ಮದ ಬೆಳಕಿನಿಂದ ದಿವ್ಯವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಹಾಗೂ ಶ್ರೇಷ್ಠ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಮೌಲ್ಯಯುತ ಮಾರ್ಗಗಳನ್ನು ಸ್ವಾಮಿ ವಿವೇಕಾನಂದರ ಸಂದೇಶಗಳ ಮೂಲಕ ತಿಳಿಸಿದರು. ಹಾಗೆಯೇ ನಮ್ಮ ಮನಸ್ಸಿನಲ್ಲಿ ಅಧಮ್ಯವಾದ ಶಕ್ತಿ ಇದೆ. ಆ ಶಕ್ತಿಯಿಂದ ಅಗಾಧವಾದುದ್ದನ್ನು ಸಾಧಿಸಲು ನಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳುವುದು ಹೇಗೆ? ಎನ್ನುವುದನ್ನು ಕಲಿತುಕೊಳ್ಳಬೇಕು ಎಂದರು. ಅವಧಿ-೨: ಶ್ರದ್ಧೆ ಮತ್ತು ದೈವತ್ವ ನಡೆಸಿಕೊಟ್ಟವರು: ಧಾರವಾಡದ ಪಂಚತಂತ್ರ ಗುರುಕುಲದ ಸಂಸ್ಥಾಪಕರು ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳ ಆಚಾರ್ಯರಾದ ಪೂಜ್ಯ ಯರ್ರೀಸ್ವಾಮಿ ಗುರೂಜೀ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ದಿವ್ಯವಾದ, ಶ್ರೇಷ್ಠವಾದ ಶ್ರದ್ಧೆಯಿದೆ ಹಾಗೂ ಆಧ್ಯಾತ್ಮಿಕ ಪ್ರವೃತ್ತಿಯಿದೆ. ಆ ಗುಣಗಳನ್ನು ಹೊರತೆಗೆಯುವ ಸರಳ ಮಾರ್ಗಗಳನ್ನು ಪ್ರಚಲಿತ ವಿದ್ಯಮಾನಗಳ ಮೂಲಕ ಸ್ವಾರಸ್ಯಕರವಾಗಿ ತಿಳಿಸಿದರು. ಅವಧಿ-೩: ರಾಮಾಯಣ ಮಹಾಭಾರತ ಮತ್ತು ಚಾರಿತ್ರ್ಯ. ನಡೆಸಿಕೊಟ್ಟವರು: ದಾವಣಗೆರೆಯ ಸಂಸ್ಕೃತ ವಿದ್ವಾಂಸರು ಹಾಗು ಚಿಂತಕರಾದ ಶ್ರೀ ವೆಂಕಟಗಿರೀಶಾಚಾರ್ಯರು. ತಮ್ಮ ಚಿಂತನಪೂರ್ವಕ ಸಂವಾದದಲ್ಲಿ ವ್ಯಕ್ತಿ ತನ್ನ ಆಜೀವಪರ್ಯಂತ ಅನುಭವಿಸುವ ಪ್ರತಿ ಕ್ರಿಯೆಗಳಲ್ಲಿ ಭಾರತೀಯ ಮಹಾಕಾವ್ಯಗಳ ಸತ್ವವಿದೆ. ಅಲ್ಲಿನ ಎಲ್ಲಾ ಮೌಲ್ಯಯುತ ಅಂಶಗಳು ಎಲ್ಲರ ಚಾರಿತ್ರ್ಯವನ್ನು ಸಂಪದ್ಭರಿತವಾಗಿ ಮಾಡುತ್ತವೆ ಎಂದು ತಿಳಿಸಿದರು. ಅವಧಿ-೪: ಭಾರತೀಯ ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಆಧ್ಯಾತ್ಮಿಕತೆ ನಡೆಸಿಕೊಟ್ಟವರು: ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದ ಕಲಾ ಇತಿಹಾಸ ಬೋಧಕರು ಹಾಗೂ ವಿಮರ್ಶಕರಾದ ಶ್ರೀ ದತ್ತಾತ್ರೇಯ ಎನ್ ಭಟ್. ರಂಗೋಲಿ ಬಿಡಿಸುವುದರಲ್ಲಿ, ದೇವಾನುದೇವತೆಗಳ ಚಿತ್ರ-ಶಿಲ್ಪ ನಿರ್ಮಾಣದಲ್ಲಿ, ಮನೆ-ಮಠ, ಮಂದಿರಗಳ ರಚನೆಯಲ್ಲಿಯೂ ಕೂಡ “ಲೋಕಾ: ಸಮಸ್ತಾ: ಸುಖಿನೋ ಭವಂತು” ಎಂಬ ಆಶಯ ನಮ್ಮದು. ಇದು ನಮ್ಮ ಪುರಾತನರು ಹಾಕಿ ಕೊಟ್ಟ ಸತ್ ಸಂಪ್ರದಾಯ. ಭಾರತೀಯರು ತಮ್ಮ ಎಲ್ಲಾ ಕಾರ್ಯಗಳಲ್ಲಿಯೂ ಆತ್ಮೋನ್ನತಿ ಎಂಬ ಧ್ಯೇಯ ಹೊಂದಿದ್ದರು. ಹಾಗೇಯೇ ಕಲಾವಿದರಿಂದ ರಚನೆಯಾದ ಪ್ರತಿಯೊಂದು ಕಲಾಕೃತಿಗಳಲ್ಲಿ ಭವ್ಯವಾದ ಕಲೆ ಮತ್ತು ವಾಸ್ತುಶಿಲ್ಪಗಳನ್ನು ಕಾಣಬಹುದಾಗಿದೆ ಎಂದು ತಿಳಿಸಿದರು. ಅವಧಿ-೫: ದಿನನಿತ್ಯ ಜೀವನದಲ್ಲಿ ಭಗವದ್ಗೀತೆ ದರ್ಶನ ನಡೆಸಿಕೊಟ್ಟವರು: ದಾವಣಗೆರೆಯ ಹಿರಿಯ ವಾಗ್ಮಿಗಳು ಹಾಗೂ ಚಿಂತಕರಾದ ಶ್ರೀ ಜಗನ್ನಾಥ್ ನಾಡಿಗೇರ್. ತಮ್ಮ ಆನುಭಾವಿಕ ನುಡಿಯಲ್ಲಿ ಪ್ರಸ್ತಾನಾತ್ರಯಗಳ ದಿವ್ಯದರ್ಶನ ಜೊತೆಗೆ ಭಗವದ್ಗೀತೆಯು ಪ್ರತಿಯೊಬ್ಬರ ವೈಯಕ್ತಿಕ ಬದುಕಿನಲ್ಲಿ ನಿರ್ವಹಿಸುವ ಮಹತ್ವಪೂರ್ಣ ಅಂಶಗಳನ್ನು ಎಲ್ಲರ ಮನಮುಟ್ಟುವಂತೆ ತಿಳಿಸಿದರು. ಅವಧಿ-೬: ಭಜನ್ ಸಂಧ್ಯಾ ನಡೆಸಿಕೊಟ್ಟವರು: ಹರಿಹರದ ಹರಿಹರೇಶ್ವರ ಸ್ವಾಮಿಯ ದಿವ್ಯ ಸನ್ನಿಧಾನದ ವಿದ್ಯಾರ್ಥಿಗಳು ಹಾಗೂ ಎಲ್ಲಾ ಶಿಕ್ಷಕರು. ವೈಕುಂಠ ಏಕಾದಶಿಯ ಪ್ರಯುಕ್ತ ಭಜನೆಗಳು ನೇರವೇರಿದವು. ಅವಧಿ-೭: ಭಗವದ್ಗೀತೆ ಮತ್ತು ಆಧ್ಯಾತ್ಮಿಕತೆ ನಡೆಸಿಕೊಟ್ಟವರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಸಂಪನ್ಮೂಲ ವ್ಯಕ್ತಿಗಳಾದ ಡಾ. ಹೆಚ್. ಬಿ. ಮಂಜುನಾಥ್. ಭಗವದ್ಗೀತೆ ಸಮಷ್ಠಿ ತತ್ವದ ಆಧಾರದ ಮೇಲೆ ಆಧ್ಯಾತ್ಮಿಕ ನೆಲೆಗಟ್ಟನ್ನು ವೈಜ್ಞಾನಿಕ ಮನೋಭಾವದಲ್ಲಿ ರೂಪಿಸುವ ಸದುದ್ದೇಶದಿಂದ ಮೂಡಿಬಂದ ದಿವ್ಯೌಷಧವಾಗಿದೆ. ಪ್ರತಿಯೊಬ್ಬರು ಓದಿ, ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಎರಡನೇ ದಿನ:ಅವಧಿ-೧: ಪುಣ್ಯಸ್ಥಳ ದರ್ಶನ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಪುಣ್ಯಸ್ಥಳದಲ್ಲಿನ ಶ್ರೀ ರಾಘವೇಂದ್ರ ಕೃಪಾಶ್ರಮ ವೀಕ್ಷಣೆ. ದೇವಾನುದೇವತೆಗಳ ಸಮುಚ್ಚಯವನ್ನು ಹೊಂದಿರುವ ಈ ಸ್ಥಳದಲ್ಲಿ ಜಪ-ತಪ, ಹೋಮ-ಹವನಗಳು ಸಾಂಗೋಪ ಸಾಂಗವಾಗಿ ನೇರವೇರಿದವು. ಕಾರ್ಯಕ್ರಮದ ನೇತೃತ್ವವನ್ನು ಭಾರತೀಯ ಆಡಳಿತ ಸೇವೆಯ ನಿವೃತ್ತ ಅಧಿಕಾರಿಗಳು ಹಾಗೂ ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಎನ್ ಆರ್ ಸುಧಾಕರ್ ಅವರು ವಹಿಸಿ ಪುಣ್ಯಸ್ಥಳದ ಐತಿಹಾಸಿಕ ಹಿನ್ನೆಲೆ, ಶ್ರೀ ರಾಘವೇಂದ್ರ ಗುರೂಜೀಯವರ ತಪಸ್ಸಿನ ಸಾಧನೆಗಳು, ಜಪ-ತಪ,ಹೋಮ-ಹವನಗಳನ್ನು ಪ್ರತಿ ದಿನವೂ ಏಕೆ ಮಾಡಬೇಕು ಎಂಬ ಮೌಲ್ಯಯುತವಾದ ಮಾಹಿತಿಗಳನ್ನು ನೆರೆದಿದ್ದ ಸರ್ವರಿಗೂ ತಿಳಿಸಿದರು. ನಂತರ ಏಷ್ಯಾದ ಎರಡನೆಯ ದೊಡ್ಡ ಕೆರೆ ಶಾಂತಿಸಾಗರ ಹಾಗೂ ಅಲ್ಲಿನ ಶ್ರೀ ಸಿದ್ದೇಶ್ವರಸ್ವಾಮಿ ದೇವಸ್ಥಾನವನ್ನು ವೀಕ್ಷಿಸಲಾಯಿತು. ಅವಧಿ-೨: ಆಧ್ಯಾತ್ಮಿಕ ಚಟುವಟಿಕೆಗಳು ನಡೆಸಿಕೊಟ್ಟವರು: ಶಾಲೆಯ ಸಮಾಜ-ವಿಜ್ಞಾನ ಅಧ್ಯಾಪಕರಾದ ಶ್ರೀಮತಿ ವರದಾ. ಹರಿಹರ ನಾಮಮೃತದ ಮಹತ್ತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಬರವಣಿಗೆಯನ್ನು ಮಾಡಿಸಿದರು. ಅವಧಿ-೩: ಶ್ರೇಷ್ಠ ಬದುಕಿಗೆ ಸಂಯಮ ನಡೆಸಿಕೊಟ್ಟವರು: ದಾವಣಗೆರೆಯ ಸಾಧನಾಶ್ರಮದ ಪೂಜ್ಯ ಮಾತಾ ಯೋಗಾನಂದಮಯಿ ಮಾತಾಜೀ. ತಮ್ಮ ಆನುಭಾವಿಕ ಸಂದೇಶಗಳಲ್ಲಿ ವ್ಯಕ್ತಿಯು ಸಂಯಮದಿಂದ ಇರಲು ಅಳವಡಿಸಿಕೊಳಬೇಕಾದ ಬೇಕಾದ ಸರಳ ಮಾರ್ಗಗಳನ್ನು ರಾಮಕೃಷ್ಣ ಪರಮಹಂಸ, ಶಾರಾದದೇವಿ ಹಾಗೂ ವಿವೇಕಾನಂದರ ವಾಣಿಯ ಮೂಲಕ ತಿಳಿಸಿದರು. ಸಮಾರೋಪ ಮತ್ತು ಅನುಭವ ಕಥನ ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಶಾಲೆಯ ಸದಸ್ಯರಾದ ಶ್ರೀ ವಿನಾಯಕ ರಾನಡೆಯವರು ಮಾತನಾಡುತ್ತ ವಿದ್ಯಾರ್ಥಿ ಜೀವನದಲ್ಲಿಯೇ ಇಂತಹ ಆಧ್ಯಾತ್ಮಿಕ ಪರ್ವಗಳಂತಹ ಸಂಸ್ಕಾರಭರಿತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಮೌಲ್ಯಯುತವಾದ ಜೀವನವನ್ನು ರೂಪಿಸಿಕೊಳ್ಳುವ ಬಗೆಯನ್ನು ತಿಳಿಸಿದರು. ಪ್ರತಿ ಶಾಲೆಯಿಂದ ಒಬ್ಬ ವಿದ್ಯಾರ್ಥಿ ತಮ್ಮ ಅನುಭವ ಕಥನವನ್ನು ಹಂಚಿಕೊಂಡರು. ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ್ದ ಪೂಜ್ಯ ಮಾತಾ ಯೋಗನಂದಮಯಿ ಮಾತಾಜೀಯವರು ಆನಂದಮಯ ಬದುಕಿಗೆ ಆಧ್ಯಾತ್ಮಿಕತೆಯ ಅವಶ್ಯಕತೆಯನ್ನು ತಿಳಿಸುತ್ತಾ ನೆರೆದಿದ್ದ ಸರ್ವರಿಗೂ ಶುಭ ಕೋರಿದರು.