Davanagere, Oct 8: The Annual Sports Meet was held herein Rashtrotthana Vidya Kendra – Davangere. The Administrative Head, Rastrotthana CBSE Schools, Karnataka, Sri Maheswaraiah S. B. graced the program. A March past (Jyoti Relay) was conducted by the students. The oath was administered by the State Academic Head, Rashtrotthana CBSE Schools, Karnataka, Smt. Manjula. The Chief Guest Sri Maheswaraiah highlighted the impact of implementation of ‘Panchmukhi Shikshana’ in Rashtrotthana schools, importance of sports in student life, benefits of physical exercise, discipline and team work. And inspired the children by talking about PV Sindhu and Mary Kom. North Cluster Head, Rashtrotthana CBSE Schools, Karnataka and Secretary, Rashtrotthana Vidya Kendra, Sri Jayanna spoke about the importance of sports in developing life skills like leadership, communication and problem-solving and in building personality. He emphasized the need for students to develop patriotism and responsibility towards the nation. Cultural programme, dumbbell dance and aerobics exhibition were the major attractions of the programme. The sports meet was enthusiastically participated by students in various events like track and field, team sports and individual sports.
ದಾವಣಗೆರೆ, ಅ. 8: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ದಾವಣಗೆರೆಯಲ್ಲಿ ವಾರ್ಷಿಕ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ರಾಜ್ಯ ಆಡಳಿತ ಪ್ರಮುಖರು, ರಾಷ್ಟ್ರೋತ್ಥಾನ ಸಿ.ಬಿ.ಎಸ್.ಸಿ. ಶಾಲೆಗಳು, ಕರ್ನಾಟಕ, ಶ್ರೀ ಮಹೇಶ್ವರಯ್ಯ ಎಸ್. ಬಿ. ಅವರು ಆಗಮಿಸಿದ್ದರು. ವಿದ್ಯಾರ್ಥಿಗಳಿಂದ ಪಥಸಂಚಲನ (ಜ್ಯೋತಿ ರಿಲೇ) ನಡೆಯಿತು. ಪ್ರಮಾಣವಚನವನ್ನು ರಾಜ್ಯ ಶೈಕ್ಷಣಿಕ ಪ್ರಮುಖ್, ರಾಷ್ಟ್ರೋತ್ಥಾನ ಸಿ.ಬಿ.ಎಸ್.ಸಿ. ಶಾಲೆಗಳು, ಕರ್ನಾಟಕ, ಶ್ರೀಮತಿ ಮಂಜುಳಾ ಬೋಧಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಮಹೇಶ್ವರಯ್ಯ ಅವರು ರಾಷ್ಟ್ರೋತ್ಥಾನ ಶಾಲೆಗಳಲ್ಲಿ ‘ಪಂಚಮುಖಿ ಶಿಕ್ಷಣ’ ಅನುಷ್ಠಾನದ ಪರಿಣಾಮ, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮಹತ್ತ್ವ, ದೈಹಿಕ ವ್ಯಾಯಾಮ, ಶಿಸ್ತು ಮತ್ತು ಸಾಂಘಿಕ ಕಾರ್ಯದ ಪ್ರಯೋಜನಗಳನ್ನು ಎತ್ತಿ ತೋರಿಸಿದರು. ಮತ್ತು ಪಿ ವಿ ಸಿಂಧು ಮತ್ತು ಮೇರಿ ಕೋಮ್ ಬಗ್ಗೆ ಮಾತನಾಡುವ ಮೂಲಕ ಮಕ್ಕಳಿಗೆ ಸ್ಫೂರ್ತಿ ನೀಡಿದರು.ಆಡಳಿತ ಪ್ರಮುಖರು, ಉತ್ತರ ಕ್ಲಸ್ಟರ್ ರಾಷ್ಟ್ರೋತ್ಥಾನ ಪರಿಷತ್ ಸಿ.ಬಿ.ಎಸ್.ಸಿ. ಶಾಲೆಗಳು, ಕರ್ನಾಟಕ ಮತ್ತು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಶ್ರೀ ಜಯಣ್ಣ ಅವರು ನಾಯಕತ್ವ, ಸಂವಹನ ಮತ್ತು ಸಮಸ್ಯೆ ಪರಿಹರಿಸುವಂತಹ ಜೀವನ ಕೌಶಲ್ಯಗಳನ್ನು ಬೆಳೆಸುವಲ್ಲಿ ಮತ್ತು ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಕ್ರೀಡೆಯ ಮಹತ್ತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು ದೇಶಭಕ್ತಿ ಮತ್ತು ರಾಷ್ಟ್ರದ ಬಗ್ಗೆ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು.ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಡಂಬ್ಬೆಲ್ ನೃತ್ಯ ಮತ್ತು ಏರೋಬಿಕ್ಸ್ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.ಕ್ರೀಡಾಕೂಟವು ಟ್ರ್ಯಾಕ್ ಮತ್ತು ಫೀಲ್ಡ್, ತಂಡ ಕ್ರೀಡೆಗಳು ಮತ್ತು ವೈಯಕ್ತಿಕ ಕ್ರೀಡೆಗಳಂತಹ ವಿವಿಧ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಂದ ಉತ್ಸಾಹದಿಂದ ಭಾಗವಹಿಸಿದ್ದರು.