The 11th International Yoga Day and World Music Day in RVK – Davanagere

Davanagere, June 21: Rashtrotthana Vidya Kendra – The 11th International Yoga Day and World Music Day were celebrated in Davangere in collaboration with Rashtrotthana Vidya Kendra, Rashtrotthana Vidyalaya and Rashtrotthana Samyukta Purva College, Vijayavani Daily. Dr. Mallikarjuna Dambal graced the program. In the program, the administrative head and secretary, Sri Jayanna, gave the introductory remarks and remembered Patanjali Muni and said that yoga is very important for a healthy and fit life, keeping the mind and body strong. He conveyed his best wishes to everyone through the Rashtrotthana Parivar. Yoga demonstrations like meditation, pranayama, and surya namaskar were conducted for the children under the leadership of yoga teacher Smt. Geeta. The Chief Guest spoke about the types of Ashtanga yoga, healthy lifestyle, meaning of asanas, importance and background of yoga, and let us move towards a sustainable life through yoga. He emphasized the motto of yoga, ‘One land, one health’. Sri Naveen M. B., Editor of Vijayavani Newspaper, spoke and said that yoga is a valuable contribution of our Indian culture, it relieves stress, increases concentration and strength and that we should make yoga a practice in our daily life.

ದಾವಣಗೆರೆ, ಜೂ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ರಾಷ್ಟ್ರೋತ್ಥಾನ ವಿದ್ಯಾಲಯ ಹಾಗೂ ರಾಷ್ಟ್ರೋತ್ಥಾನ ಸಂಯುಕ್ತ ಪದವಿ ಪೂರ್ವ ಕಾಲೇಜು, ವಿಜಯವಾಣಿ ದಿನಪತ್ರಿಕೆ ಇವರ ಸಹಯೋಗದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನ ಮತ್ತು ವಿಶ್ವ ಸಂಗೀತ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಮಲ್ಲಿಕಾರ್ಜುನ ಡಂಬಳ ಅವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ಪ್ರಮುಖರು ಹಾಗೂ ಕಾರ್ಯದರ್ಶಿಗಳಾದ ಶ್ರೀ ಜಯಣ್ಣ ಅವರು ಪ್ರಾಸ್ತವಿಕ ನುಡಿಗಳನ್ನು ಆಡುತ್ತಾ, ಪತಂಜಲಿ ಮುನಿಗಳನ್ನು ಸ್ಮರಿಸಿ, ಆರೋಗ್ಯಯುತ ಸ್ವಸ್ಥ ಜೀವನಕ್ಕಾಗಿ, ಮನಸ್ಸು ಮತ್ತು ಶರೀರವನ್ನು ಸದೃಢವಾಗಿಟ್ಟುಕೊಳ್ಳಲು ಯೋಗ ಅತಿ ಮುಖ್ಯವಾದದ್ದು ಎಂದು ಹೇಳಿದರು. ರಾಷ್ಟ್ರೋತ್ಥಾನ ಪರಿವಾರದ ಮೂಲಕ ಎಲ್ಲರಿಗೂ ಶುಭಾಷಯವನ್ನು ತಿಳಿಸಿದರು. 9ನೇ ತರಗತಿ ವಿದ್ಯಾರ್ಥಿ ಚೇತನ್ ಮಾತನಾಡಿ ವಿಶ್ವ ಸಂಗೀತ ದಿನದ ಮಹತ್ವ, ಹುಟ್ಟು, ಆರಂಭ ಮತ್ತು ಸಂಗೀತದ ಪ್ರಕಾರಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಹನುಮಾನ್ ಗೌಡ್ರು ಪ್ರತಿಜ್ಞಾ ವಿಧಿಯನ್ನು ನೆರವೇರಿಸಿಕೊಟ್ಟರು. ಯೋಗ ಶಿಕ್ಷಕಿ ಶ್ರೀಮತಿ ಗೀತಾ ಅವರ ನೇತೃತ್ವದಲ್ಲಿ ಮಕ್ಕಳಿಗೆ ಧ್ಯಾನ, ಪ್ರಾಣಾಯಾಮ, ಸೂರ್ಯನಮಸ್ಕಾರ ಮುಂತಾದ ಯೋಗ ಪ್ರದರ್ಶನಗಳನ್ನು ಮಾಡಿಸಲಾಯಿತು. ಮುಖ್ಯ ಅತಿಥಿಗಳು ಮಾತನಾಡುತ್ತಾ, ಅಷ್ಟಾಂಗ ಯೋಗಗಳ ಪ್ರಕಾರಗಳು, ಆರೋಗ್ಯಯುತ ಜೀವನಶೈಲಿ, ಆಸನಗಳ ಅರ್ಥ, ಯೋಗದ ಪ್ರಾಮುಖ್ಯತೆ ಹಿನ್ನೆಲೆ ಮಹತ್ವ, ಹಾಗೂ ಯೋಗದ ಮೂಲಕ ಸುಸ್ಥಿರ ಜೀವನದತ್ತ ಸಾಗೋಣ ಎಂದು ತಿಳಿಸಿದರು. ಯೋಗದ ಧ್ಯೇಯವಾಕ್ಯವಾದ ‘ಒಂದು ವಿಶ್ವ, ಒಂದೇ ಆರೋಗ್ಯ’ ಎಂಬ ಮಾತನ್ನು ಮನದಟ್ಟು ಮಾಡಿದರು. ವಿಜಯವಾಣಿ ಪತ್ರಿಕೆಯ ಸಂಪಾದಕರಾದ ಶ್ರೀ ನವೀನ್ ಎಂ. ಬಿ. ಅವರು ಮಾತನಾಡುತ್ತ ಯೋಗವು ನಮ್ಮ ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆ, ಅದು ಒತ್ತಡ ನಿವಾರಣೆ, ಏಕಾಗ್ರತೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ನಿತ್ಯ ಜೀವನದಲ್ಲಿ ಯೋಗವನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳಿ ಎಂದು ಹೇಳಿದರು.

Scroll to Top