Career Guidance Workshop in RVK – Davanagere

Davanagere, Jan. 25: A career guidance workshop was organized for the students of class 9th and 10th herein Rashtrotthana Vidya Kendra – Davangere. Speaking as the workshop guide, Dr. Basavaraj Bankar, retired Registrar of Davangere University, praised the systematic and cultured education system at Rashtrotthana Vidya Kendra. He also gave complete information about the various professional courses of study after class ten. Students are the builders of the future; India has a youth community of 53 percent and they should cultivate a positive attitude towards the future.Then, Sri Shambhulingappa, the school coordinator, spoke and explained the importance of the MSW course.

ದಾವಣಗೆರೆ, ಜ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಒಂಬತ್ತು ಮತ್ತು ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಾಗಾರದ ಮಾರ್ಗದರ್ಶಕರಾಗಿ ಆಗಮಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ನಿವೃತ್ತ ರಿಜಿಸ್ಟರ್ ಡಾ.ಬಸವರಾಜ ಬಣಕಾರ್ ಅವರು ಮಾತನಾಡುತ್ತ ರಾಷ್ಟ್ರೋತ್ಥಾನ ಶಿಕ್ಷಣ ಸಂಸ್ಥೆಯಲ್ಲಿನ ಕ್ರಮಬದ್ಧ ಹಾಗೂ ಸಂಸ್ಕಾರಭರಿತ ಶಿಕ್ಷಣ ವ್ಯವಸ್ಥೆಯನ್ನು ಕೊಂಡಾಡಿದರು. ಹಾಗೂ ಹತ್ತನೇಯ ತರಗತಿಯ ನಂತರ ವಿದ್ಯಾಭ್ಯಾಸದ ವಿವಿಧ ವೃತ್ತಿಪರ ಕೋರ್ಸ್ ಗಳ ಬಗೆಗೆ ಪರಿಪೂರ್ಣ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳು ಭಾವಿ ಭವಿಷ್ಯದ ನಿರ್ಮಾತೃಗಳು; ಭಾರತದಲ್ಲಿ ಶೇಕಡ 53 ರಷ್ಟು ಯುವ ಸಮುದಾಯವಿದ್ದು ಭವಿಷ್ಯತ್ ಚಿಂತನೆಯನ್ನು ಸಕಾರಾತ್ಮಕವಾಗಿ ರೂಢಿಸಿಕೊಳ್ಳಬೇಕೆಂದು ತಿಳಿಸಿದರು. ನಂತರ ಶಾಲೆಯ ಸಂಚಾಲಕರಾದ ಶಂಭುಲಿಂಗಪ್ಪ ಅವರು ಮಾತನಾಡುತ್ತ MSW ಕೋರ್ಸ್ ನ ಮಹತ್ತ್ವವನ್ನು ತಿಳಿಸಿದರು.

Scroll to Top