Davangere, Aug. 15: Rashtrotthana Vidya Kendra – Davanagere and
Rashtrotthana Vidyalaya and Rashtrotthana Samyukta Pre-University
College celebrated the 79th Independence Day.The Chief Guest was Dr. Prema Prabhudev, Senior Gynaecologist, SS Medical College, Davanagere. At the beginning of the program, the guest dignitaries were welcomed tothe stage by the students’ parade and the children of the NCC teams
along with the Ghosh team. Abhishek, a student of Rashtrotthana Vidyalaya, remembered the national leaders who ruled the country along with the developing India. The Chief Guest praised the culture and proud country of India by remembering the brave women of India and the social conscience of the people.The presidential address was delivered by Sri Jayanna, a member of the Governing Body and Secretary of Rashtrotthana Institutions, who spoke in detail about the way the freedom fighters fought for freedom and nationalism, and said that our India is the best India.This was followed by cultural programs performed by the students of Rashtrotthana Vidya Kendra and Rashtrotthana Vidyalaya.
ದಾವಣಗೆರೆ, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆ ಮತ್ತು ರಾಷ್ಟ್ರೋತ್ಥಾನ ವಿದ್ಯಾಲಯ ಹಾಗೂ ರಾಷ್ಟ್ರೋತ್ಥಾನ ಸಂಯುಕ್ತ ಪದವಿಪೂರ್ವ ಕಾಲೇಜು ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಡಾ. ಪ್ರೇಮ ಪ್ರಭುದೇವ್, ಹಿರಿಯ ಸ್ತ್ರೀರೋಗ ತಜ್ಞೆ, ಎಸ್ ಎಸ್ ವೈದ್ಯಕೀಯ ಕಾಲೇಜು, ದಾವಣಗೆರೆ ಇವರು ಆಗಮಿಸಿದ್ದರು. ಈ ಕಾರ್ಯಕ್ರಮದ ಆರಂಭದಲ್ಲಿ ಅತಿಥಿ ಗಣ್ಯರನ್ನು ವಿದ್ಯಾರ್ಥಿಗಳ ಕವಾಯತು ಮತ್ತು ಘೋಷ್ತಂಡದ ಜೊತೆ ಎನ್. ಸಿ. ಸಿ. ತಂಡದ ಮಕ್ಕಳು ವೇದಿಕೆಗೆ ಸ್ವಾಗತಿಸಿದರು. ರಾಷ್ಟ್ರೋತ್ಥಾನ ವಿದ್ಯಾಲಯದ ವಿದ್ಯಾರ್ಥಿ ಅಭಿಷೇಕ್, ಅಭಿವೃದ್ಧಿ ಹೊಂದುತ್ತಿರುವ ಭಾರತದ ಜೊತೆಗೆ ದೇಶವನ್ನಾಳಿದ ರಾಷ್ಟ್ರ ನಾಯಕರನ್ನು ತನ್ನ ಮಾತುಗಳಲ್ಲಿ ಸ್ಮರಿಸಿದನು. ಮುಖ್ಯ ಅತಿಥಿಗಳು ಭಾರತದ ವೀರವನಿತೆಯರು ಹಾಗೂ ಸಾಮಾಜಿಕ ಕಳಕಳಿ ಹೊಂದಿದ ಗಣ್ಯರನ್ನು ನೆನಪಿಸಿಕೊಳ್ಳುವುದರ ಮೂಲಕ ಭಾರತದ ಸಂಸ್ಕೃತಿ ಹಾಗೂ ಹೆಮ್ಮೆಯ ದೇಶದ ಬಗ್ಗೆ ತಮ್ಮ ಮಾತುಗಳಲ್ಲಿ ಕೊಂಡಾಡಿದರು.ಅಧ್ಯಕ್ಷೀಯ ಭಾಷಣವನ್ನು ಆಡಳಿತ ಮಂಡಳಿಯ ಸದಸ್ಯರು, ರಾಷ್ಟ್ರೋತ್ಥಾನ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಜಯಣ್ಣ ಅವರು ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರೀತಿಯನ್ನು ಹಾಗೂ ರಾಷ್ಟ್ರೀಯತೆಯ ಬಗ್ಗೆ ಸವಿಸ್ತಾರವಾಗಿ ತಮ್ಮ ಮಾತುಗಳಲ್ಲಿತಿಳಿಸುವುದರ ಮೂಲಕ ನಮ್ಮ ಭಾರತ ಶ್ರೇಷ್ಠ ಭಾರತ ಎಂದರು. ನಂತರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಗೂ ರಾಷ್ಟ್ರೋತ್ಥಾನ ವಿದ್ಯಾಲಯದ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.